ಭೂ ಕಬಳಿಕೆ ಆರೋಪ; IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

By Aishwarya

Published On:

Follow Us

IAS ಅಧಿಕಾರಿ‌ ವಿರುದ್ಧ ಬಾಲಿವುಡ್ ನ ಖ್ಯಾತ ಗಾಯಕ, ನಟ ಲಕ್ಕಿ ಅಲಿ ಅವರ ತಮ್ಮಗೆ ಸಂಬಂಧಿಸಿದ ಭೂಮಿಯನ್ನು ರೋಹಿಣಿ(Rohini Sindhuri) ಮತ್ತು ಅವರು ಪತಿ ಸುಧೀರ್, ಭಾಮೈದ ಮಧುಸೂಧನ್ ರೆಡ್ಡೆ ಲಪಟಾಯಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ
ದೂರು ನೀಡಿದ್ದಾರೆ.

ಯಲಹಂಕ ನ್ಯೂ ಟೌನ್ ವ್ಯಾಪಿಯಲ್ಲಿ ಬರುವ ತಮ್ಮ ಟ್ರಸ್ಟ್ ಗೆ ಸಂಬಂಧಿಸಿದ ಭೂಮಿಯನ್ನು ಐಎಎಸ್ ಅಧಿಕಾರಿ ರೋಹಿಣಿ‌ ಮತ್ತು ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಲ್ಲಿಸಿರುವ ದೂರಿನ ಪ್ರತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಗಾಯಕ ಲಕ್ಕಿ ಅಲಿ ಅವರು ಪೋಸ್ಟ್ ಮಾಡಿದ್ದಾರೆ.

ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಈ ಭೂ ಹಗಣದಲ್ಲಿ ಯಲಹಂಕ ಎಸಿಪಿ ಮಂಜುನಾಥ, ಸರ್ವೇಯರ್ ಮನೋಹನ್ ಕೂಡಾ ಭಾಗಿಯಾಗಿದ್ದಾರೆ ಎಂದು‌ ಅರೋಪಿಸಲಾಗಿದೆ.

ಈ ಪ್ರಕರಣ ಸಂಬಧ 2022 ರಲ್ಲೇ ಲಕ್ಕಿ ಅಲಿ ಅವರು ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿದರು‌‌ ಕೂಡಾ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲಾ ಹಾಗೂ‌ ಸ್ಥಳೀಯ ‌ಪೋಲಿಸರು ನನ್ನ ದೂರಿಗೆ ಯಾವುದೇ ರೀತಿ ಸಹಾಯ ಮಾಡುತ್ತಿಲ್ಲ ಎಂದು‌ ತಮ್ಮ ಟ್ವೀಟ್ ನಲ್ಲಿ ಡಿಜಿ/ಐಜಿಪಿ ಗೆ‌ ಟ್ಯಾಗ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow