Darshan: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಜಾಮೀನು ಗಾಗಿ ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಒಂದು ಕಡೆ ಪತ್ನಿ ವಿಜಯಲಕ್ಷ್ಮಿ ಕಾನೂನಿನ ಹೋರಾಟ ನಡೆಸುತ್ತಿದ್ದರೇ ಮತ್ತೊಂದಡೆ ಜೈಲಿನಲ್ಲಿ ಇದ್ದುಕೊಂಡು ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ನಟ ದರ್ಶನ್ ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಲಿನಲ್ಲಿ ಕೈದಿಗಳಿಗೆ ವಾರಕ್ಕೆ ಮೂರು ಬಾರಿ ಕರೆಮಾಡುವ ಅವಕಾಶ ಇರುತ್ತದೆ. ಆ ಮೂರು ಬಾರಿಯೂ ನಟ ದರ್ಶನ್ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿದ್ದಾರೆ. ಇದಲ್ಲದೆ ಅಕ್ಕ ಪಕ್ಕ ಇರುವ ಕೈದಿಗಳ ಕರೆ ಮಾಡಲು ನೀಡಿರುವ ಲಿಮಿಟ್ ತಾವೇ ಬಳಸಿಕೊಂಡು ಕರೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.ರಾತ್ರಿಯಾದರೆ ಸಾಕು ದರ್ಶನ್ ಕಡೆಯಿಂದ ನಿರ್ಮಾಪಕರಿಗೆ ಫೋನ್ ಕರೆಗಳು ಹೋಗಲು ಶುರುವಾಗುತ್ತವೆ.
ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಸಾಕಷ್ಟು ಪ್ರಭಾವಿಗಳು, ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಹೀಗಾಗಿ ನಿರ್ಮಾಪಕರ ಜೊತೆ ಜಮೀನು ಕುರಿತಾಗಿ ಫೋನ್ ಕರೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸುತ್ತೇವೆ.