Darshan: ತಾಯಿ, ಸೋಹದರನ ಕಂಡು ಕಣ್ಣೀರಿಟ್ಟ ನಟ ದರ್ಶನ್

By Aishwarya

Published On:

Follow Us

Darshan: ಕೊಲೆ ಪ್ರಕರಣದ ಆರೋಪದ ಅಡಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರ ತಾಯಿ‌ ಸೇರಿದಂತೆ ಕುಟುಂಬಸ್ಥರು‌ ಸೋಮವಾರ ಭೇಟಿಯಾದರು.

ನಟ ದರ್ಶನ್ ಜೈಲು ವಾಸ 10ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಬೇಜಾರಿನಲ್ಲಿದ್ದ ನಟ‌‌ ದರ್ಶನ್ ಈಗ ಕೊಂಚ ರಿಲ್ಯಾಕ್ಸ್ ಆಗಿದ್ದಾರಂತೆ. ಜೈಲಿಗೆ ನಿನ್ನೆ ಪತ್ನಿ ಹಾಗೂ ಪುತ್ರನ ಭೇಟಿ ಬೆನ್ನಲ್ಲೇ ಸೋಮವಾರ ತಾಯಿ ಹಾಗೂ ಸಹೋದರ ಭೇಟಿ ನೀಡಿದ್ದು, ದರ್ಶನ್ ಕಣ್ಣೀರಿಟ್ಟಿದ್ದಾರೆ.

ಮೀನಾ ಅವರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ,ಪುತ್ರ, ಸಹೋದರ ದಿನಾಕರ್ ತುಗೂದೀಪ ಭೇಟಿ ಮಾಡಿ ಕೆಲಕಾಲ ಚರ್ಚೆ ನಡಿಸಿದರು. ತಾಯಿಯನ್ನು ಕಂಡ ನಟ ದರ್ಶನ್ ಹಾಕಿದರು ಇದೇ ವೇಳೆ ಜೂತೆಗಿದ್ದ ಎಲ್ಲರೂ ಬಾವುಕರಾದರು. ಈ ವೇಳೆ ತಾಯಿ ಮೀನಾ ಕೂಡ ಕಣ್ಣೀರಿಟ್ಟು ಮಗನ‌ನ್ನು ತಬ್ಬಿ ಸಂತೈಸಿದರು. ಸಹೋದರ ದಿನಕರ್‌ ನಿನ್ನೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು ಎಂದು ಜೈಲಿನ ಮೂಲಗಳು ತಿಳಿಸಿವೆ.

ಈ ಮಧ್ಯೆ ದರ್ಶನ್‌ ಅವರನ್ನು ಭೇಟಿಯಾಗಲು ಹುಬ್ಬಳ್ಳಿಯ ಅಭಿಮಾನಿ ರಾಜೇಶ್ವರಿ ಎಂಬ ವೃದ್ಧೆ ಸೋಮವಾರ ಕಾರಾಗೃಹದ ಬಳಿಗೆ ಬಂದು ಭೇಟಿಗೆ ಅವಕಾಶ ನೀಡುವಂತೆ ಪೊಲೀಸರ ಬಳಿ ಗೋಗರೆದರು. ಪೊಲೀಸರು ಅವಕಾಶ ನೀಡಲಿಲ್ಲ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow