Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ದರ್ಶನ್ ಪರ ವಕೀಲರು ಇಂದು ವಾಪಾಸ್ ಪಡೆದಿದ್ದಾರೆ.
ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದ, ದರ್ಶನ್ ಪರ ವಕೀಲರು ಈ ಹಿಂದೆ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದ ಅರ್ಜಿ ವಾಪಸ್ ಪಡೆಯಲು ಮೆಮೋ ನೀಡಿದ್ದಾರೆ. ಅರ್ಜಿ ವಿಚಾರಣೆಗೂ ಮುನ್ನವೇ ಅರ್ಜಿ ವಾಪಸ್ ಪಡೆದಿದ್ದಾರೆ.ನಟ ದರ್ಶನ್ಗೆ ಜೈಲೂಟ ಒಗ್ಗುತ್ತಿಲ್ಲ ಪೌಷ್ಠಿಕಾಂಶದ ಊಟವಿಲ್ಲದೆ ನಟ ದರ್ಶನ್ ಸೊರಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮನೆಯೂಟಕ್ಕೆ ವ್ಯವಸ್ಥೆ ಮಾಡಿ ಎಂದು ದರ್ಶನ್ ಕುಟುಂಬಸ್ಥರ ಬಳಿ ಕೇಳಿಕೊಂಡಿದ್ದರು ಎನ್ನಲಾಗ್ತಿದೆ.
ಈ ಹಿನ್ನಲೆಯಲ್ಲಿ ಮತ್ತೆ ಮೇಲ್ಮನವಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿತ್ತು. ಆದರೆ ಇಂದು ತಾಂತ್ರಿಕ ಕಾರಣದಿಂದಾಗಿ ನಟ ದರ್ಶನ್ ಪರ ವಕೀಲ ಅರುಣ್ ಅವರು ಮನೆ ಊಟ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ಇಂದು (ಜುಲೈ 29) ಹೈ ಕೋರ್ಟ್ ದರ್ಶನ್ ಮನೆಯೂಟದ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದ್ರೆ. ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ದರ್ಶನ್ ಪರ ವಕೀಲರು ಹಳೆಯ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದ್ರಿಂದ ನಟ ದರ್ಶನ್ಗೆ ಜೈಲೂಟವೇ ಗಟ್ಟಿ ಆಗಿದೆ. ಅನ್ನ, ಸಾಂಬಾರ, ಮುದ್ದೆ ತಿನ್ನುತ್ತಾ ದರ್ಶನ್ ಜೈಲಿನಲ್ಲಿ ದಿನ ಕಳೆಯಬೇಕಿದೆ.