ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ

By Aishwarya

Published On:

Follow Us

Vijayalakshmi Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಮತ್ತು ಕುಟುಂಬದ ವಿರುದ್ಧ ಯಾವುದೇ ಸುದ್ದಿಯನ್ನು ಪ್ರಕಟಿಸದಂತೆ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯದಿಂದ ಮಾಧ್ಯಮಗಳಿಗೆ ತಡೆಯಾಜ್ಞೆ ತರಲಾಗಿದೆ.

ಪ್ರಕರಣದ ಕುರಿತು ತಮ್ಮ instagram ಖಾತೆಯಲ್ಲಿ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮಿ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈ ಘಟನೆಯಿಂದ ನನಗೆ ಮತ್ತು ನನ್ನ ಮಗನಿಗೆ ದರ್ಶನ್ ಹಾಗೂ ಅಭಿಮಾನಿಗಳಿಗೆ ಪದಗಳಲ್ಲಿ ವಿವರಿಸಲಾಗದ ನೋವುವನ್ನು ಅನುಭವಿಸುತ್ತಿದ್ದೇವೆ.

ದರ್ಶನ್ ಪ್ರಕರಣದ ಕುರಿತು ಹಲವು ಮಾಧ್ಯಮಗಳು ದಿನವಿಡೀ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಕೆಲವು ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಕಟಿಸುತ್ತಿದ್ದು ಇದು ಅಭಿಮಾನಿಗಳು ಮತ್ತು ಕುಟುಂಬದವರಿಗೆ ನೋವು ನೋವುಂಟು ಮಾಡುತ್ತಿವೆ.

ಹಾಗಾಗಿ ನ್ಯಾಯಾಲಯದ ಮೊರೆ ಹೋಗಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಧ್ಯಮಗಳಗೆ ತಡೆಯಾಜ್ಞೆ ತರುವ ಮೂಲಕ ತನಿಕಾಧಿಕಾರಿಗಳು ಬಹಿರಂಗಪಡಿಸುವ ಮಾಹಿತಿಯನ್ನಷ್ಟೇ ಪ್ರಸಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ತಾಯಿ ಚಾಮುಂಡೇಶ್ವರಿ ಹಾಗೂ ನಮ್ಮ ಕಾನೂನಿನ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ನ್ಯಾಯಾಲಯದಿಂದ ಪ್ರಕಟಗೊಳ್ಳುವ ತೀರ್ಪು ದರ್ಶನ್ ಹಾಗೂ ಅಭಿಮಾನಿಗಳನ್ನು ಖುಷಿ ತರಲಿದೆ ಎಂಬ ನಂಬಿಕೆ ಇದೆ ಸತ್ಯಮೇವ ಜಯತೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಕರಣವು ವಿಚಾರಣೆಗೆ ತೆಗೆದುಕೊಂಡಿದ್ದ ದಿನವೂ ಇಂದಿಗೆ ಅಂತ್ಯವಾಗಿದ್ದು ಇದು ದರ್ಶನ್ ಮತ್ತು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈಗಾಗಲೇ ಪೊಲೀಸರು ಎಲ್ಲಾ ಸಾಕ್ಷಿಗಳು ಅಧಿಕೃತ ದಾಖಲೆಗಳು ಸಂಗ್ರಹಿಸಿದ್ದು ನ್ಯಾಯಾಲಯದ ಮುಂದೆ ಇಡಲು ಸಿದ್ಧವಾಗಿದ್ದಾರೆ ಅಂತಿಮವಾಗಿ ಇಂದು ತೀರ್ಪುಗಾರ ಬೀಳಲಿದ್ದು ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow