ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಿನವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಇರುತ್ತಿದೆ, ಕಳೆದ ವಾರವಷ್ಟೇ ಪೆಟ್ರೋಲ್ ಡೀಸೆಲ್ ಮತ್ತು ಹಾಲಿನ ಬೆಲೆಯನ್ನು ಹೆಚ್ಚಿಗೆ ಮಾಡಲಾಯಿತು. ಜನಸಾಮಾನ್ಯರಿಗೆ ಗಾಯದ ಮೇಲೆ ಬರೆಯಂತೆ ಇದೀಗ ಅಕ್ಕಿಯ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.
ಕರ್ನಾಟಕ ವಲ್ಲದೆ ದೇಶದಲ್ಲಿ ಅಕ್ಕಿಯ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇ.25ರಷ್ಟು ಏರಿಕೆ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಕಿಯ ಬೆಲೆ ಪ್ರತಿ ಕೆಜಿಗೆ 20 ರಿಂದ 25ರೂ ಏರಿಕೆ ಕಂಡಿದೆ. ಮಳೆಯ ಭಾವ ಹವಾಮಾನ ವೈಪರಿತ್ಯ ಕಾರಣದಿಂದ ರೈತರು ಭತ್ತ ಬೆಳೆಯಲು ಕಷ್ಟವಾಗುತ್ತಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಕಿಲೋ ಸೋನಾಮಸೂರಿ ಉತ್ತಮ ಅಕ್ಕಿ ದರ ಸಗಟು ಮಾರುಕಟ್ಟೆಯಲ್ಲಿ 45 ರಿಂದ 48ರೂ ಇತ್ತು. ಈಗ 65 ರಿಂದ 68 ರೂ ಗಳಗೆ ಏರಿಕೆಯಾಗಿದೆ. ಹೊಸ ಭತ್ತವು 2500 ರಿಂದ 2700ರೂ ರವರೆಗೆ ಮಾರಾಟವಾಗುತ್ತಿದೆ.
ಮುಂಗಾರು ಹಂಗಾಮಿನ ಮೊದಲ ಬೆಳೆಗೆ ರೈತರಿಗೆ ಸಮರ್ಪಕವಾಗಿ ನೀರು ದೊರೆತಿಲ್ಲ, ಕೆಲವು ರೈತರು ಕಾಲುವೆ ನೀರು, ಬೋರ್ವೆಲ್ ನೀರು, ಕೆರೆ ನೀರಿನಿಂದ ಭತ್ತ ಬೆಳೆದರು ನಿರೀಕ್ಷೆ ಮಟ್ಟದಲ್ಲಿ ಬೆಳೆ ಬರಲಿಲ್ಲ. ನಂತರ ಎರಡನೇ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದ್ದು ಅಕ್ಕಿಯ ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಪ್ರತಿ ಕೆಜಿಗೆ 64 ರಿಂದ 65ರೂ, ಹೊಸ ಸೋನಾ ಮಸೂರಿ ಅಕ್ಕಿಗೆ 57ರಿಂದ 58ರೂ ದರವಿದೆ. ಮುಂದಿನ ದಿನಗಳಲ್ಲಿ ಭತ್ತದ ಬೆಲೆಯು ಹೆಚ್ಚಾಗುತ್ತದೆ ಎಂದು ರೈತರು ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಅಕ್ಕಿಯ ಬೆಳೆಯು ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.