Anant Ambani Post Wedding:ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮಚೆಂಟ್ ವಿವಾಹ ಅತ್ಯಂತ ಅದ್ದೂರಿಯಾಗಿ ನಡೆದಿದೆ. ವಿಶ್ವದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಿದ್ದರು. ಈ ಸಂಭ್ರಮ ಮುಂದುವರಿದ ಭಾಗವಾಗಿ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮಗಳಗೆ ಸಿದ್ಧತೆಗಳು ನಡೆದಿದೆ.
ಲಂಡನ್ನ ಐಷಾರಾಮಿ ಸೆವೆನ್ ಸ್ಟಾರ್ ಆದ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ. ಎರಡು ತಿಂಗಳವರೆಗೆ, ಅಂದರೆ ಸೆಪ್ಟೆಂಬರ್ವರೆಗೆ ಇಡೀ ಹೋಟೆಲ್ ಅನ್ನು ಅಂಬಾನಿ ಕುಟುಂಬ ಕಾಯ್ದಿರಿಸಿದೆ. ಇಲ್ಲಿಯೇ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ ನಡೆಯುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ, ಅದು ಸಹ ಲಂಡನ್‌ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆಯಂತೆ. ಇದು ಕೋಟಿ ಕೋಟಿ ರೂಪಾಯಿ ವ್ಯಯವಾಗಲಿದ್ದು, ಕೆಲವೇ ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ‘ವಿವಾಹದ ನಂತರದ’ ಸಮಾರಂಭಕ್ಕಾಗಿ ಶೀಘ್ರದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಅಂಬಾನಿ ಕುಟುಂಬ ಒಂದು ವಾರದೊಳಗೆ ಲಂಡನ್‌ಗೆ ತೆರಳುವ ನಿರೀಕ್ಷೆಯಿದೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ.
ಕೆಲವರ ಪ್ರಕಾರ ಇದು ಕೊನೆಯ ಸಮಾರಂಭವಾಗಿರಲಿದ್ದು, ಇದಾದ ಬಳಿಕ ಮನೆಯಲ್ಲಿ ಮತ್ತೊಂದು ಅತಿಥಿಗಳ ಕೂಟ ನಡೆಯಲಿದೆ ಎಂದು ಊಹಿಸಿದ್ದಾರೆ. ಏಕೆಂದರೆ ಮುಂಬೈನ ಅವರ ನಿವಾಸದಲ್ಲಿ ಈವರೆಗೆ ಯಾವುದೇ ದೊಡ್ಡ ಕಾರ್ಯಕ್ರಮ ನಡೆದಿಲ್ಲ. ಆದರೆ ಲಂಡನ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬುದಕ್ಕೆ ಅಧಿಕೃತ ಹೇಳಿಕೆಯಾಗಲಿ, ದಿನಾಂಕವಾಗಲಿ ಪ್ರಕಟವಾಗಿಲ್ಲ.