Nandini Milk Price: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯ ಬೆನ್ನಲೇ ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರಗಳನ್ನು ಏರಿಕೆ ಮಾಡಿದೆ. ಪ್ರತಿ ಲೀಟರ್‌ಗೆ 2 ರುಪಾಯಿ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್ ಹಾಲಿಗೆ ನಾಳೆಯಿಂದ 44 ರೂ. ಆಗುತ್ತಿದೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಭೀಮನಾಯ್ಕ್ ನಂದಿನಿ ಹಾಲಿನ ದರ ಹೆಚ್ಚಿಸಿದೆ ತಿಳಿಸಿದ್ದಾರೆ.
ನತಂರ “ಮಾತನಾಡಿದ ಅವರು ಪ್ರತಿ ಲೀಟರ್ ಹಾಲಿಗೆ 2 ರೂ.ಏರಿಕೆ ಮಾಡಲಾಗಿದೆ. ಪ್ರತಿ ಅರ್ಥ ಲೀ ಹಾಲಿನ ದರ ಇನ್ನೂ ಮಂದೆ 22 ರೂ.ನಿಂದ 24ರೂ ಗೆ ಏರಿಕೆ ಹೆಚ್ಚಿಸಲಾಗಿದೆ. ಆದರೆ ಗ್ರಾಹಕರಿಗೆ ಸಿಗುತ್ತಿದ್ದ ಒಂದು ಲೀಟರ್ ಪ್ಯಾಕೆಟ್ ನಲ್ಲಿ 50ML ಹೆಚ್ಚಿಗೆ ಹಾಲನ್ನು ಪ್ರತಿ ಪಾಕೆಟ್ ನಲ್ಲಿ ನೀಡಲಾಗುತ್ತದೆ. ಅದರಂತೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 550ML ಹಲೋ ಹೆಚ್ಚುವರಿ ಸಿಗಲಿದೆ” ಎಂದು ತಿಳಿಸಿದರು.
“ರೈತರ ಹಿತದೃಷ್ಟಿಯಿಂದ ಹಾಗೂ ಎಲ್ಲಾ ಹಾಲು ಒಕ್ಕೂಟಗಳ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆಯು ಕಡಿಮೆ ಇದೆ ಬೆಲೆ ಹೆಚ್ಚುವರಿ ಕೂಡಾ ರೈತರಿಗೆ ಸೇರುತ್ತದೆ” ಎಂದರು
ನಮ್ಮ ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. ಸದ್ಯ 98 ಲಕ್ಷ 17ಸಾವಿರ ಲೀ. ಹಾಲು ಸಂಗ್ರಹ ಆಗುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಎಂದು ಹೇಳಿದರು.
ಕಳೆದ ಆಗಸ್ಟ್ ನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಏರಿಕೆ ಮಾಡಿತ್ತು ಅದರೆ ಇದೀಗ ಮತ್ತೆ ಹಾಲಿನ ದರವನ್ನು ಏರಿಸಿರುವುದು ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಗಾಯದ ಮೇಲೆ ಬರೆ ಹೇಳಿದಂತಾಗಿದೆ.
Nandini Milk Price: ರಾಜ್ಯದ ಜನತೆಗೆ ಮತ್ತೊಂದು ಬರೆ: ನಂದಿನಿ ಹಾಲಿನ ಬೆಲೆ 2 ರೂ ಹೆಚ್ಚಳ!
By Aishwarya
Published On:

For Feedback - feedback@khnewstimes.com