ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಿಸಿಯಲ್ಲಿದ್ದ ಸಾರ್ವಜನಿಕರಿಗೆ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನ ಜಲ ಮಂಡಲಿಯು ಅರ್ಥಿಕ ಸಂಕಷ್ಟದಲ್ಲಿದ್ದು ಬೆಲೆ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕುಡಿಯುವ ನೀರಿನ ಮಾಸಿಕ ದರವನ್ನು ಏರಿಕೆ ಅನಿರ್ವಾ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದ ಅವರು ಕೆಳದ 14 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಈ ಕಾರಣ ಜಲಮಂಡಳಿಯಲ್ಲಿ ಕಾರ್ಯನಿರ್ವಸುವ ಸಿಬ್ಬಂದಿಗಳಗೆ ವೇತನ ನೀಡಲು ಸಮಸ್ಯೆ ಆಗುತ್ತಿದೆ ಮತ್ತು ಅರ್ಥಿಕವಾಗಿ ಮಂಡಳಿಯು ಸಂಕಷ್ಟ ಎದುರಿಸುತ್ತಿದೆ. ಅದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದರು.
ಜಲ ಮಂಡಳಿಯ ಸಿಬ್ಬಂದಿಗಳಿಗೆ ವೇತನ ನೀಡಲು ಹಣವಿಲ್ಲ, ನೀರಿನ ಬಳಕೆಯ ವಿದ್ಯುತ್ ವೆಚ್ಚ ಸಹ ಪಾವತಿಸಲು ಹಣವಿಲ್ಲ ನೀರಿನ ಬಿಲ್ ಹೆಚ್ಚಾಗಿ ಮಾಡಬೇಕಾ ಬೇಡವಾ ನೀವೇ ಹೇಳಿ ಎಂದು ಬೆಲೆ ಏರಿಕೆಯ ಬಗ್ಗೆ ಉಪ ಮುಖ್ಯ ಮಂತ್ರಿ ಸುಳಿವು ನೀಡಿದರು.
2014 ರಿಂದ ಇಲ್ಲಿವರೆಗೂ ನೀರಿನ ಬೆಲೆ ಏರಿಕೆ ಮಾಡಿಲ್ಲ ವಿದ್ಯುತ್ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆ ಅಗುತ್ತಲೆ ಇದೆ. ಅದರೂ ಕೂಡಾ ನೀರಿನ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ ಕಾರಣ ಜಲ ಮಂಡಳಿಯು ಪ್ರತಿ ವರ್ಷ ನಷ್ಟ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.