ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅಪಾರವಾದ ನಂಬಿಕೆ ಇದೆ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆ ಆಗಿಲ್ಲ ಇಂದು ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್(Sumalatha) ದರ್ಶನ್ ಪ್ರಕರಣದ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೂಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಪ್ರಕರಣದ ಕುರಿತು ರಾಜ್ಯಾದ್ಯಂತ ಪರ ವಿರೋಧ ಚರ್ಚೆ ಬಹಳ ದೊಡ್ಡ ಮಟ್ಟಕ್ಕೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Anganwadi: ಸರ್ಕಾರದಿಂದ ಗುಡ್ ನ್ಯೂಸ್; ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಬ್ಯಾಗ್, ಯೂನಿಫಾರ್ಮ್ ವಿತರಣೆ
ನಟ ದರ್ಶನ್ ಮತ್ತು ಸುಮಲತಾ ಅಂಬರೀಶ್ ಅಮ್ಮ ಮಗನ ಸಂಬಂಧ ನೋಡಿದವರ ಕಣ್ಣು ಕುಕ್ಕುತಿತ್ತು, ಅನೇಕ ಬಾರಿ ಸುಮಲತಾ ಅಂಬರೀಶ್ ರವರ ಪರ ನಟ ದರ್ಶನ್ ರಾಜಕೀಯ ಚುನಾವಣಾ ಪ್ರಚಾರಗಳನ್ನು ನಡೆಸಿಕೊಟ್ಟು ಸಹಾಯ ಮಾಡಿದ್ದಾರೆ.
ಈ ಪ್ರಕರಣದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಶ್ ” ನಾನು 44 ವರ್ಷಗಳಿಂದ ನಟಿಯಾಗಿ ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿ ವಾಸುಸುತ್ತಿದ್ದೇನೆ. ಕಳೆದ 5 ವರ್ಷಗಳಿಂದ ರಾಜಕೀಯ ರಂಗಕ್ಕೆ ಪ್ರವೇಶ ನೀಡಿ ಸಂಸದ ಆಗಿದ್ದೆ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ್ತಾ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿ ಇಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಮ್ಮ ಮಾತುಗಳನ್ನು ಆರಂಭಿಸಿದ್ದಾರೆ.
ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಈ ಪೋಸ್ಟ್ ಮಾಡುತ್ತಿದ್ದೇನೆ. ಏಕೆಂದರೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು ಪ್ರೋಸ್ತಾಯಿಸಲು ಅಥವಾ ನನ್ನ ನಿಲುವಿನ ಬಗ್ಗೆ ಅಭಿಮಾನಿಗಳಲ್ಲಿ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡಲು ನಾನು ಬಯಸುವುದಿಲ್ಲ.
ನಂತರ ಪೋಸ್ಟ್ ನಲ್ಲಿ ರೇಣುಕಾ ಸ್ವಾಮಿ ಅವರ ತಂದೆ ತಾಯಿ ಕುರಿತು ತಮ್ಮ ಮಗ ಮತ್ತು ಪತಿಯನ್ನು ಕಳೆದುಕೊಂಡಿರುವ ರೇಣುಕಾ ಸ್ವಾಮಿಯವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಬರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಇಂದು ಸಂತಾಪ ಸೂಚಿಸಿದ್ದಾರೆ.
ಈ ಘಟನೆಯು ನನ್ನ ಹೃದಯವನ್ನು ಚಿಂತೆಗೊಳಿಸಿತು ಮತ್ತು ನಾನು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹಲವಾರು ದಿನಗಳವರೆಗೆ ಆಘಾತ ಮತ್ತು ನೋವಿನ ಸ್ಥಿತಿಯಲ್ಲಿದ್ದೆ. ಎಂದು ಕೊನೆಗೂ ಈ ಪ್ರಕರಣದ ಕುರಿತು ಮೌನ ಮುರಿದಿದ್ದಾರೆ.
ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅಪಾರ ನಂಬಿಕೆ ಇದೆ ದರ್ಶನ್ ಈ ಪ್ರಕಾರಣದಲ್ಲಿ ಆರೋಪಿಯಾಗಿದ್ದು ಇನ್ನು ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆ ಆಗಿಲ್ಲ. ಇದು ಕಾನೂನಿಗೆ ಬಿಟ್ಟಿದ್ದು ಮತ್ತು ಈ ಕುರಿತು ಈಗಾಗಲೇ ನಿರ್ಣಯಿಸುವುದು ಮತ್ತು ಶಿಕ್ಷೆ ವಿಷಯ ವಿಧಿಸುವುದು ಬೇರೆ ಯಾರು ಅಲ್ಲ ಆ ವಿಚಾರದಲ್ಲಿ ಅವರ ನಿಲುವು ಮತ್ಯಾ ಸತ್ಯತೆಗಳನ್ನು ಸ್ಪಷ್ಟಪಡಿಸುವ ಅವಕಾಶವಾದರೂ ಇರಲಿ.
ಈ ಪರಿಸ್ಥಿತಿಯಲ್ಲಿ ನಾನು ನೆಮ್ಮದಿಯಿಂದ ಈ ಸಮಸ್ಯೆಯಿಂದ ದೂರವಿರುವುದು ಅಸಾಧ್ಯ ಇದು ನನ್ನದೇ ಕೌಟುಂಬಿಕ ಸಮಸ್ಯೆ ಇದು ಅವರ ಜೀವನದ ನೆಮ್ಮದಿ, ಭದ್ರತೆ,ಭವಿಷ್ಯಕ್ಕೆ ಸಂಬಂಧಪಟ್ಟಂತೆ ಅತ್ಯಂತ ಗಂಭೀರ ವಿಷಯ ನಮಗೆಲ್ಲ ನೋವಾಗುತ್ತಿದೆ, ಚಿತ್ರರಂಗ ಹಸ್ತವ್ಯಸ್ತವಾಗಿದೆ. ಸಾವಿರ ಜನರ ಜೀವನೋಪಾಯ ಅವರ ಚಲನಚಿತ್ರ ನಿರ್ಮಾಣಗಳ ಮೇಲೆ ಅವಲಂಬಿತವಾಗಿದೆ ಇದನ್ನು ಎದುರಿಸುವುದು ಯಾರಿಗೂ ಸುಲಭವಲ್ಲ ಎಂದಿದ್ದಾರೆ.
ದರ್ಶನ್ ಅಭಿಮಾನಿಗಳಿಗೆ ಒಂದು ಹೃದಯಪೂರ್ವಕ ವಿನಂತಿ, ದಯವಿಟ್ಟು ಶಾಂತವಾಗಿರಿ ಮುತ್ತು ಈ ಕ್ಷಣದಲ್ಲಿ ಹೇಳಿಕೆಗಳನ್ನು ನೀಡಬೇಡಿ ಅಥವಾ ಯಾವುದೇ ನಕರಾತ್ಮಕ ಕ್ರಿಯೆಗೆ ಪ್ರತಿಕ್ರಿಯೆಸಬೇಡಿ. ಅದು ಅವರ ಕುಟುಂಬ ಅಥವಾ ಹತ್ತಿರದವರ ಮೇಲೆ ಪರಿಣಾಮ ಬೀರಬಹುದು. ಇದು ಕೇವಲ ಕೆಟ್ಟ ಹಂತ, ಆದರೆ ಅವರಿಗೆ ನಮ್ಮೆಲ್ಲರ ನೈತಿಕ ಬೆಂಬಲದ ಅಗತ್ಯವಿದೆ. ಆದುದರಿಂದ ಎದೆಗುಂದ ಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ವಿನಂತಿ ಮಾಡಿದ್ದಾರೆ.
ಈ ಪೋಸ್ಟ್ ಕೊನೆಯಲ್ಲಿ ನಮ್ಮ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ, ದೇವರಲ್ಲಿ ನಂಬಿಕೆ ಇರಲಿ ಎಲ್ಲವೂ ಸರಿಯಾಗುತ್ತದೆ. ಸತ್ಯಮೇವ ಜಯತೆ ಎಂದು ಸುಮಲತಾ ಅಂಬರೀಶ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.