Tharun Sudhir: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಜೋಡಿ

By Aishwarya

Published On:

Follow Us

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್(Tharun Sudhir) ಅವರು ನಟಿ ಸೋನಲ್ ಮಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದೆ. ಇದೇ ಆಗಸ್ಟ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇದೇ ಆಗಸ್ಟ್ 10, 11ರಂದು ತರುಣ್ ಹಾಗೂ ಸೋನಲ್ ಮದುವೆ ನಡೆಯಲಿದೆ. ದರ್ಶನ್ ಅವರೇ ತರುಣ್ ಮತ್ತು ಸೋನಲ್ ಮದುವೆಗೆ ಮುನ್ನುಡಿ ಬರೆದಿದ್ರಂತೆ. ಹಾಗಾಗಿ ಮದುವೆ ಡೇಟ್ ಮುಂದಕ್ಕೆ ಹಾಕಲು ತರುಣ್ ತೀರ್ಮಾನಿಸಿದ್ದರು. ಆದರೆ ಹಿರಿಯರ ಸಲಹೆ ಮತ್ತು ನಟ ದರ್ಶನ್ ಒತ್ತಾಯ ಮೇರೆಗೆ ಮದುವೆಗೆ ಮೊದಲೇ ನಿಶ್ಚಯಿಸಿದ ದಿನದಂದ ಮದುವೆಯಾಗಲು ತರುಣ್ ಮುಂದಾಗಿದ್ದಾರೆ.

ಮದುವೆ ವಿಷಯವನ್ನು ಅಧಿಕೃತವಾಗಿ ವಿಡಿಯೋ ಒಂದರ ಮೂಲಕ ತಮ್ಮ ಮದುವೆ ವಿಷಯದ ಕುರಿತು ಮಾಹಿತಿ ನೀಡಿದ್ದು,‌ ಸೋಶಿಯಲ್ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಚಿತ್ರಮಂದಿರದಲ್ಲಿ ಶೂಟ್ ಮಾಡಲಾಗಿದೆ. ಇಬ್ಬರೂ ಗಮನ ಸೆಳೆದಿದ್ದಾರೆ. ಈ ಜೋಡಿಗೆ ಎಲ್ಲ ಕಡೆಗೆಗಳಿಂದ ಶುಭಾಶಯ ಕೋರಲಾಗುತ್ತಿದೆ.

ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್​ನಲ್ಲಿ ವಿವಾಹ ನಡೆಯಲಿದೆ. ಆಗಸ್ಟ್ 10ರಂದು ಆರತಕ್ಷತೆ ಹಾಗೂ ಆಗಸ್ಟ್ 11ರಂದು ವಿವಾಹ ಕಾರ್ಯ ನಡೆಯಲಿದೆ. ತರುಣ್ ಸುಧೀರ್ ಹಾಗೂ ಸೋನಲ್ ‘ರಾಬರ್ಟ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ತರುಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರೆ ಸೋನಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow