ರಾಮನಗರ(Ramanagara) ಜಿಲ್ಲೆಯ ಹೆಸರು ಬದಲಾವಣೆ ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹಲವು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಡಿಕೆಶಿ ನೇತೃತ್ವದ ನಿಯೋಗ ರಾಮನಗರ ಎಂದು ಕರೆಯುವ ಬದಲು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಸೇರಿ 14 ನಾಯಕರು ಮನವಿ ಸಲ್ಲಿಸಿದ್ದು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ರಾಮಲಿಂಗ ರೆಡ್ಡಿ ಉಪಸ್ಥಿತರಿದ್ದರು.
ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ ನಿರ್ಧಾರಕ್ಕೆ ಪ್ರತಿಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ರಾಮನಗರದಲ್ಲಿ ರಾಮ ಇದ್ದಾನೆ ಎಂಬ ದ್ವೇಷವೋ ಅಥವಾ ರಿಯಲ್ ಎಸ್ಟೇಟ್ ದಂದೆಯೂ– ಆರ್ ಅಶೋಕ್
ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕರಾದ ಆರ್ ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಕಾಂಗ್ರೆಸ್ ಸರ್ಕಾರದ ಸಂಚಿನ ಹಿಂದೆ ರಾಮದ್ ದೇಶ ರಿಯಲ್ ಎಸ್ಟೇಟ್ ದಂಧೆ ಅಡಗಿರುವುದು ಸ್ಪಷ್ಟವಾಗಿದೆ ಡಿಕೆ ಶಿವಕುಮಾರ್ ಅವರೇ ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಬೆಂಗಳೂರಿನ ಜನತೆಗೆ ಮೋಸ ಮಾಡಿದಂತಾಯಿತು ಈಗ ಹೆಸರು ಬದಲಾವಣೆ ಮಾಡುವ ಮೂಲಕ ರಾಮನಗರ ಜಿಲ್ಲೆಯ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರಲ್ಲ ಎಂದು ಬರೆದುಕೊಂಡಿದ್ದಾರೆ.
ಹೆಸರು ಬದಲಾವಣೆಯ ಹಿಂದೆ ಯಾವ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ – ನಿಖಿಲ್ ಕುಮಾರಸ್ವಾಮಿ
ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಡಿಎಸ್ ಯುವ ಜನತಾದಳ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ ” ಪುರಾಣಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ ಅದನ್ನು ಬೆಂಗಳೂರ್ ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಅಜೆಂಡ ಅಡಗಿದೆಯೋ ಗೊತ್ತಿಲ್ಲ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗಿದೆ ಇನ್ನು ಒಳ ಗುಟ್ಟು ಮಾತ್ರ ರೆಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.