ಇಡೀ ಮನುಕುಲವನ್ನೇ ಸಾವಿನ ದವಡೆಗೆ ನೂಕಿದ್ದ ಕೋವಿಡ್ 19 ಮರಣಾಂತಿಕ ವೈರಸ್(Corona Virus – Covid-19) ಇದೀಗ ಮತ್ತೆ ಕಾಣಿಸಿಕೊಂಡಿದೆ. ಈ ಬಾರಿಯ ಕೋವಿಡ್ 19 ಶರವೇಗದಲ್ಲಿ ಜನರನ್ನು ತಲುಪುತ್ತದೆ ಎಂದು ಡಬ್ಲ್ಯೂ ಎಚ್ ಓ ಎಚ್ಚರಿಸಿದೆ.
ಕಳೆದ 24 ಗಂಟೆಗಳಲ್ಲಿ UK ಮತ್ತು USA ಎರಡು ದೇಶಗಳಲ್ಲಿ ಕೊರೊನ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.
ಮಾಧ್ಯಮದ ವರದಿಗಳ ಪ್ರಕಾರ UK ದೇಶಗಳಲ್ಲಿ ಪ್ರಕರಣ ಹೆಚ್ಚಿರುವ ಪ್ರದೇಶಗಳಲ್ಲಿ ಮಾಸ್ಕ್ ಬಳಸಲು ಕಡ್ಡಾಯ ಮಾಡಲಾಗಿದೆ ಮತ್ತು ಲಸಿಕೆಗಳನ್ನು ವೇಗವಾಗಿ ನೀಡಲಾಗುತ್ತಿದೆ. USA ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾದ ಕಾರಣ ಯುನೈಟೆಡ್ ಸ್ಟೇಟ್ಸ್ ನಿರ್ಬಂಧಗಳನ್ನು ಮತ್ತೆ ಜಾರಿಗೆ ತಂದಿದೆ.
ಈ ಮಹಾಮಾರಿಯನ್ನು ಕರೋನಾ LB.1 ಎಂದು ಗೊತ್ತುಪಡಿಸಲಾಗಿದೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಮಂಡಿಸಿದ ವರದಿಯಲ್ಲಿ, ಜೂನ್ 26, 2024 ರಂದು ಪ್ರತಿ 25,000 ಬ್ರಿಟಿಷ್ ನಾಗರಿಕರಲ್ಲಿ ಒಬ್ಬರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು ಎಂದು ಬಹಿರಂಗಪಡಿಸಿದೆ.