ಈಗಿನ ಕಾಲದ ಯುವಕ ಯುವತಿಯರಿಗೆ ಬಾರ್ ಮುಂದೆ ಮದ್ಯ ತೆಗೆದುಕೊಳ್ಳುವುದು ಹಿಂಜರಿಕೆಯ ವಿಷಯವಲ್ಲ. ಆದರೂ ಕೆಲವರು ಬಾರ್ ಬಳಿ ಹೋಗಲು ಯೋಚನೆ ಮಾಡುತ್ತಾರೆ ಪರಿಚಯಸ್ಥರ ಕಣ್ಣಿಗೆ ಬಿದ್ದರೆ ಏನು ಮಾಡುವುದು ಇಂದು ಆಲೋಚಿಸುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಯೋಚನೆಗಳನ್ನು ಮಾಡುವ ಅಗತ್ಯ ಇಲ್ಲ ಯಾಕೆಂದರೆ ನೀವು ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿ ಮನೆಗೆ ತರಿಸುವಂತೆಯೇ ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ಮದ್ಯವೂ ಸರಬರಾಜಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್ಡರ್ ಮಾಡಿದರೆ ಊಟ, ವಸ್ತು ಮನುಷ್ಯನ ಅಗತ್ಯತೆಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಆನ್ ಲೈನ್ ಮೂಲಕವೆ ಖರೀದಿಸಬಹುದು. ಇದರ ಮುಂದುವರೆದ ಭಾಗವಾಗಿ ಇನ್ನು ಮುಂದೆ ಸ್ವಿಗ್ಗಿ, ಬಿಗ್ಬಾಸ್ಕೆಟ್, ಜೊಮ್ಯಾಟೊ ನಿಮ್ಮ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡಲು ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ನವದೆಹಲಿ, ಕರ್ನಾಟಕ, ಹರಿಯಾಣ, ಪಂಜಾಬ್, ತಮಿಳುನಾಡು, ಗೋವಾ ಮತ್ತು ಕೇರಳದಂತಹ ರಾಜ್ಯಗಳು ಈ ಬಗ್ಗೆ ಪ್ರಾಯೋಗಿಕ ಯೋಜನೆಗಳನ್ನು ಅನ್ವೇಷಿಸುತ್ತಿವೆ ಎಂದು ಉದ್ಯಮದ ಕಾರ್ಯನಿರ್ವಾಹಕರನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಧಿಕಾರಿಗಳು ಈ ಕ್ರಮದ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಪ್ರಸ್ತುತ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿಸಲಾಗಿದೆ.
ಬಿಯರ್, ವೈನ್, ಕಡಿಮೆ ಬೆಲೆಯ ಲಿಕ್ಕರ್‌ಗಳನ್ನು ಮೊದಲಿಗೆ ಪೂರೈಕೆ ಮಾಡಲಾಗುತ್ತದೆ. ಗ್ರಾಹಕರು ಊಟ, ತಿಂಡಿ ಆರ್ಡರ್ ಮಾಡಿದಂತೆಯೇ, ಸ್ವಿಗ್ಗಿ, ಜೊಮ್ಯಾಟೋ, ಬಿಗ್‌ಬ್ಯಾಸ್ಕೆಟ್ ಅಪ್ಲಿಕೇಷನ್‌ಗಳ ಮೂಲಕ ಮನೆಯ ಬಾಗಿಲಿನವರೆಗೆ ಮದ್ಯವನ್ನು ಪೂರೈಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಮದ್ಯ ಪ್ರಿಯರು ಆರಾಮವಾಗಿ ಮನೆಯಲ್ಲೇ ಕುಳಿತು ಮದ್ಯ ಸೇವನೆ ಮಾಡಬಹುದಾಗಿದೆ.