Karnataka landslide: ಕೇರಳದ ವಯನಾಡು ಮತ್ತು ಹಾಸನದ ಶಿರೂರು ಬಳಿಯ ಗುಡ್ಡ ಕುಸಿತದ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಪಶ್ಚಿಮ ಘಟ್ಟಗಳಲ್ಲಿನ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ಗಳ ತೆರವಿಗೆ ಅರಣ್ಯ ಇಲಾಖೆಯು ಸೂಚನೆ ನೀಡಿದೆ.
ಗುಡ್ಡ ಕುಸಿತದ ದುರಂತದಿಂದ ಈಗಾಗಲೇ ಹಲವಾರು ಜನರು ಬಲಿಯಾಗಿದ್ದು, ಮಾನವನ ಅಧಿಕ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ಕರ್ನಾಟಕದ ಶಿರಾಡಿ ಘಾಟ್ ಸೇರಿದಂತೆ ಕೆಲವಡೆ ಭೂಕುಸಿತ ಉಂಟಾಗುವ ಭೀತಿ ಎದುರಾಗಿದ್ದು, ಈ ಸಂಬಂಧ ಅರಣ್ಯ ಖಾತೆಯ ಸಚಿವರಾದ ಈಶ್ವರ್ ಖಂಡ್ರೆ ಸುತ್ತೋಲೆ ಹೊರಡಿಸಲಾಗಿದೆ.
2015 ರಿಂದ ಈಚೆಗೆ ಅರಣ್ಯ ಒತ್ತುವರಿ ತಿರುವಿಗೆ ಸೂಚನೆ ನೀಡಲಾಗಿದ್ದು, ಅನಧಿಕೃತ ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚಿಸಲಾಗಿದೆ.
ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಶಿರೂರು ಮತ್ತು ಕೇರಳದ ಗುಡ್ಡ ಕುಸಿತ ರಾಜ್ಯಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಪಶ್ಚಿಮ ಘಟ್ಟದ ಉಳಿವಿಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
2015 ರಿಂದ ಈಚೆಗೆ ಆಗಿರುವ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದ್ದು, ಗಿಡ ಮರಗಳನ್ನು ನಾಶ ಮಾಡಿ ಬಡಾವಣೆಗಳು, ಹೋಂ ಸ್ಟೇ, ರೆಸಾರ್ಟ್ ಗಳ ನಿರ್ಮಾಣದಿಂದ ಈ ದುರಂತಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.