Android Mobile: ಆಂಡ್ರಾಯ್ಡ್ ಮೊಬೈಲ್ ಗಳಿಗೆ ಹ್ಯಾಕಿಂಗ್ ಭೀತಿ‌; ಕೇಂದ್ರ ಸರ್ಕಾರದ ಎಚ್ಚರಿಕೆ

By Aishwarya

Published On:

Follow Us

ದೇಶದ ಕೋಟ್ಯಾಂತರ ಆಂಡ್ರಾಯ್ಡ್ ಮೊಬೈಲ್ ಫೋನ್‌(android mobile Phone) ಗಳಿಗೆ ಹ್ಯಾಕಿಂಗ್ ಆತಂಕ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದೆ ಸೂಕ್ಷ್ಮ ಮಾಹಿತಿಗಳಿಗೆ ಕಣ್ಣ ಹಾಕುವ ಕೆಲಸಕ್ಕೆ ಹ್ಯಾಕರ್ ಗಳು ಮುಂದಾಗಿದ್ದಾರೆ. ಮೊಬೈಲ್ ಗಳಿಗೆ ದುರುದ್ದೇಶದ ಕೋಡನ್ನು ಕಳುಹಿಸುವ ಮೂಲಕ ಹ್ಯಾಕ್ ಮಾಡಲಾಗುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರದ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಎಚ್ಚರಿಕೆ ನೀಡಿದೆ.

ಈ ಮಾಹಿತಿ ತಿಳಿದ ತಕ್ಷಣ ಪ್ರಮುಖ ಮೊಬೈಲ್ ಕಂಪನಿಗಳಾದ ಸ್ಯಾಮ್‌ಸಂಗ್‌, ರಿಯಲ್‌ಮಿ, ಒನ್ ಪ್ಲಸ್, ವಿವೋ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ಕಂಪನಿಗಳು ಹ್ಯಾಕಿಂಗ್ ತಡೆಗಟ್ಟಲು ಸೆಕ್ಯೂರಿಟಿ ಪ್ಯಾಚ್ ಗಳನ್ನು ಬಿಡುಗಡೆಗೆ ಮುಂದಾಗಿದೆ.

ಸೆಕ್ಯೂರಿಟಿ ಪ್ಯಾಚ್ ಗಾಗಿ ಬಳಕೆದಾರರು ತಮ್ಮ ಮೊಬೈಲ್ ಫೋನ್ಗಳನ್ನು ಸಿಸ್ಟಮ್ ಅಪ್ಡೇಟ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಪ್ಯಾಚ್ ಅನ್ನು ಈಗಾಗಲೇ ಎಲ್ಲಾ ಕಂಪನಿಗಳು ತಮ್ಮ ಮೊಬೈಲ್ ಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇನ್ನು ಕೆಲವು ಕಂಪನಿಗಳು ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿವೆ.

ಅಪಾಯಕಾರಿ ವೆಬ್ ಸೈಟ್ ಗಳಿಗೆ ಭೇಟಿ ನೀಡುವುದು ಅಥವಾ ಗೊತ್ತಿಲ್ಲದ ಲಿಂಕ್ ಗಳನ್ನು ಕ್ಲಿಕ್ ಮಾಡುವುದನ್ನು ಮಾಡಬಾರದು. ಗೂಗಲ್ ಪೇ ಸಿಸ್ಟಮ್ ಅಪ್ ಡೇಟ್ ಗಳು, ಮೀಡಿಯಾ ಟೆಕ್, ಇಮ್ಯಾಜಿನೇಷನ್ ಗಳಲ್ಲಿ ಕೆಲವು ಲೋಪದೋಷಗಳು ಪತ್ತೆಯಾಗಿವೆ ಇದರಿಂದಾಗಿ ಆಂಡ್ರಾಯ್ಡ್ 12&13 14ನೇ ಆವೃತ್ತಿಯನ್ನು ಬಳಸುತ್ತಿರುವ ಗ್ರಾಹಕರು ಮೊಬೈಲ್ ಗಳು ಅಪಾಯಕ್ಕೆ ತುತ್ತಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow