KSRTC Bus Ticket Hike: KSRTC ಬಸ್ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ; ನಿಗಮದ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಸುಳಿವು

By Aishwarya

Published On:

Follow Us

ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರವನ್ನು(KSRTC bus ticket hike) ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಂದು ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷರಾದ ಎಸ್ ಆರ್ ಶ್ರೀನಿವಾಸ್ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟಿಕೆಟ್ ದರದಲ್ಲಿ ಶೇ.15 ರಿಂದ 20ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ 2019 ರಲ್ಲಿ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು, ಅದನ್ನು ಬಿಟ್ಟರೆ ಇವಾಗ ಮಾತ್ರ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಡೀಸೆಲ್ ಬೆಲೆಯೂ ದಿನದಿಂದ ದಿನಕ್ಕೆ ಇರುತ್ತದೆ ಕಳೆದ ಬಾರಿ ಟಿಕೆಟ್ ದರ ಹೆಚ್ಚಿಸಿದಾಗ ಡೀಸೆಲ್ ಬೆಲೆಯೂ ಪ್ರತಿ ಲೀಟರ್ ಗೆ 60 ರೂ ಇತ್ತು ಆದರೆ ಈಗ 93 ಆಗಿದೆ, ಇದರ ಜೊತೆಗೆ ಬಸ್ಸಿನ ಬಿಡಿ ಭಾಗಗಳ ಬೆಲೆಯೂ ಕೂಡ ಹೆಚ್ಚಾಗಿದೆ. ನೌಕರರಿಗೂ ಕೂಡ ಸಂಬಳ ಹೆಚ್ಚಿಗೆ ಕೊಡಬೇಕಾಗಿದೆ ಹೀಗಾಗಿ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದರು.

ಕಳೆದ ಮೂರು ತಿಂಗಳಿಂದ KSRTC 295 ಕೋಟಿ ರೂ ನಷ್ಟದಲ್ಲಿದೆ. ಪ್ರಯಾಣಿಕರಿಗೆ ವ್ಯವಸ್ಥಿತವಾಗಿ ಸಾರಿಗೆ ಸಂಚಾರವನ್ನು ಕಲ್ಪಿಸಲು ಬಸ್‌ಗಳ ನಿರ್ವಹಣೆ ಸರಿಯಾದ ಕ್ರಮದಲ್ಲಿ ಆಗಬೇಕು. ರಾಜ್ಯದಲ್ಲಿ 8000ಕ್ಕೂ ಅಧಿಕ KSRTC ಬಸ್ ಗಳಿವೆ ಇದರಲ್ಲಿ ಕೆಲವು 13 ಲಕ್ಷಕ್ಕಿಂತ ಹೆಚ್ಚಿಗೆ ಕಿಲೋಮಿಟರ್ ಗಳನ್ನು ಸಂಚರಿಸುವೆ ಇವುಗಳ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಸರಿಯಾದ ಸಮಯದಲ್ಲಿ ದರ ಪರಿಷ್ಕರಣೆ ಆಗದಿರುವ ಕಾರಣ ಸಮಸ್ಯೆಗಳು ಉದ್ಭವಿಸಿದೆ 2020ರಲ್ಲಿ ದರ ಪರಿಷ್ಕರಣೆ ಆಗಬೇಕಿತ್ತು ಎಂದರು.

ಹೊಸ ವೋಲ್ವೋ ಬಸ್ ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಾಗಲೇ 600 ಸಾಮಾನ್ಯ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಕೆಎಸ್‌ಆರ್ಟಿಸಿ ಸಂಸ್ಥೆ ಉಳಿಯಬೇಕಾದರೆ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಹೇಳಿದ್ದಾರೆ.

ಶಕ್ತಿ ಯೋಜನೆಯಿಂದ ಟಿಕೆಟ್ ದರವನ್ನು ಹೆಚ್ಚಿಗೆ ಮಾಡುತ್ತಿಲ್ಲ ಇದು ಗಂಡಸರ ಜೇಬಿಗೆ ಕತ್ತರಿ ಎಂದು ಭಾವಿಸಬೇಡಿ ಯಾರೇ ಟಿಕೆಟ್ ಖರೀದಿಸಿದರು ಸರ್ಕಾರ ಟಿಕೆಟ್ ದರವನ್ನು ಸಂಸ್ಥೆಗೆ ಕಟ್ಟಿಕೊಡಬೇಕು. ವಿದ್ಯಾರ್ಥಿಗಳ ಪಾಸ್, ಅಂಗವಿಕಲರ ಪಾಸ್ ಹೀಗೆ ರಿಯಾಯಿತಿ ದರದಲ್ಲಿ ನೀಡುವ ಪಾಸ್ ಗಳ ಹಣವನ್ನು ಸರ್ಕಾರ ನಮಗೆ ಕಟ್ಟಿಕೊಡುತ್ತದೆ ನಾವು ಯಾವುದನ್ನು ಉಚಿತವಾಗಿ ನೀಡುತ್ತಿಲ್ಲ ಎಂದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow