LPG Gas Price hike: ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆಗಳ ಕಂಪನಿಗಳು ವಾಣಿಜ್ಯ ಬಳಕೆಯ LPG ಸಿಲಿಂಡರ್ ಗಳ ಬೆಳೆಯನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರದವು ಆಗಸ್ಟ್ 1 ರಿಂದ ಜಾರಿಯಾಗಲಿದೆ. ವಾಣಿಜ್ಯ LPG ಪ್ರತಿ ಸಿಲಿಂಡರ್ ಮೇಲೆ 8.50 ರೂ ಏರಿಕೆ ಮಾಡಲಾಗಿದೆ.
14 KGಯ ಗೃಹ ಬಳಕೆಯ ಸಿಲಿಂಡರ್ ಬೆಲೆಯ ಮೇಲೆ ಯಾವುದೇ ಬದಲಾವಣೆಯಾಗಿಲ್ಲ. 19KG ಯ ವಾಣಿಜ್ಯ ಕ್ಷೇತ್ರದಲ್ಲಿ ಬಳಕೆ ಆಗುವ ಸಿಲಿಂಡರ್ ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ಬೆಲೆಯ ಬದಲಾವಣೆಯಿಂದ ಬೆಂಗಳೂರಿನಲ್ಲಿ ಪ್ರತಿ ಸಿಲೆಂಡರ್ ಗೆ 1,731 ರೂ ಏರಿಕೆ ಗಳಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 1652.80 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ಇದೇ ಸಿಲಿಂಡರ್ ಬೆಲೆ 1605 ರೂ.ಗಳಾಗಿವೆ. ಕೋಲ್ಕತಾದಲ್ಲಿ 1,764.50 ರೂ. ಆಗಿದ್ದರೆ, ಚೆನ್ನೈನಲ್ಲಿ 1,817 ರೂ. ಆಗಿದೆ.
ಜೂನ್‌ನಲ್ಲಿ 19KG ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 19 ರೂ. ಮೇ 1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆಯಾಗಿತ್ತು. ಏಪ್ರಿಲ್‌ಗೂ ಮುನ್ನ ಸತತ ಮೂರು ತಿಂಗಳಿನಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿತ್ತು.