ಕಳೆದ ಕೆಲವು ವರ್ಷಗಳಿಂದ ಸುಮಾರು 9.4ಜಿಬಿ ಡೇಟಾ ಅನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಜನಪ್ರಿಯ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ (X (Twitter) Data Leak)ನಲ್ಲಿ 200 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ.
ಸೈಬರ್ ಪ್ರೆಸ್ನ ಸಂಶೋಧಕರು ಈ ಕುರಿತು ವರದಿಯನ್ನು ನೀಡಿದ್ದು, ಸೋರಿಕೆಯಾದ ಡೇಟಾವು ಎಕ್ಸ್ನಲ್ಲಿ ಬಳಕೆದಾರರ ಇಮೇಲ್ ವಿಳಾಸಗಳು, ಹೆಸರುಗಳು ಮತ್ತು ಇತರ ಖಾತೆ ವಿವರಗಳನ್ನು ಒಳಗೊಂಡಿದೆ, ಸುಮಾರು 200 ಮಿಲಿಯನ್ ಬಳಕೆದಾರರು ಸ್ಪೈವೇರ್ ಅಥವಾ ಫಿಶಿಂಗ್ ದಾಳಿಗೆ ಗುರಿಯಾಗುತ್ತಾರೆ.
ಎಕ್ಸ್ (ಟ್ವಿಟರ್)ನಲ್ಲಿ ಸೋರಿಕೆಯಾದ ಡೇಟಾಬೇಸ್ ಅನ್ನು ಮೊದಲು ಡೇಟಾ ಸೋರಿಕೆಯನ್ನು ಪ್ರಸಿದ್ಧ ಹ್ಯಾಕಿಂಗ್ ವೇದಿಕೆಯಲ್ಲಿ ವರದಿ ಮಾಡಲಾಯಿತು, ಅಲ್ಲಿ “ಮಿಚುಪಾ” ಎಂಬ ಬಳಕೆದಾರರು ಜುಲೈ 7 ರಂದು ಹೊಸ ಖಾತೆಯನ್ನು ರಚಿಸಿ 9.7 ಜಿಬಿ ಸೋರಿಕೆಯಾದ ಡೇಟಾವನ್ನು 10 ಫೈಲ್ಗಳಾಗಿ ವಿಂಗಡಿಸಿ ಬಿಡುಗಡೆ ಮಾಡಿದರು, ಪ್ರತಿಯೊಂದೂ 1 ಜಿಬಿ ಡೇಟಾವನ್ನು ಒಳಗೊಂಡಿದೆ. ಇದು ಇನ್ನೂ ಸಾರ್ವಜನಿಕ ಡೌನ್‌ಲೋಡ್ ಗೆ ಲಭ್ಯವಿದೆ.