ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಕಳೆದ ಎರಡು ಕಂತಿನ ಹಣ(Gruhalakshmi Amount) ಇನ್ನೂ ಕೂಡ ಮಹಿಳೆಯರ ಖಾತೆಗೆ ಬಂದಿಲ್ಲ, ಹಾಗಾಗಿ ಮಹಿಳೆಯರ ಖಾತೆಗೆ ಹಣವು ಯಾವಾಗ ಎಂಬ ಪ್ರಶ್ನೆ ಮಹಿಳೆಯರಲ್ಲಿ ಮೂಡಿದ್ದು, ಈ ಕುರಿತು ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಈ ಬಾರಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುವಲ್ಲಿ ಒಂದು ತಿಂಗಳು ತಡವಾಗಿರಬಹುದು. ಆದರೆ ಯೋಜನೆ ಸ್ಥಗಿತ ಮಾಡಲ್ಲ. ಬರುವ ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ತಾಂತ್ರಿಕ ದೋಷದ ಕಾರಣ ಹಣ ವರ್ಗಾವಣೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆಗಸ್ಟ್ ಮೊದಲನೇ ವಾರದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ 2 ಕಂತಿನ 4000 ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಹೌದು ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವ ಮುಂಚಿತವಾಗಿ ಗೃಹ ಲಕ್ಷ್ಮೀ ಯೋಜನೆ ಕಂತು ಮಹಿಳೆಯರ ಅಕೌಂಟ್ ಗೆ ಜಮೆ ಮಾಡಲಾಗಿತ್ತು. ನಂತರ ಎರಡು ತಿಂಗಳು ಅವಧಿಯ ಚುನಾವಣೆ ನಂತರ ಈವರೆಗೂ ಕೆಲವರಿಗೆ ಹಣ ಬಂದಿಲ್ಲ, ಈಗ ಜೂನ್ ಮತ್ತು ಜುಲೈ ಎರಡು ತಿಂಗಳ ಹಣವನ್ನು ಒಟ್ಟಿಗೆ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮೀ ಯೋಜನೆ ನಿಲ್ಲಿಸಲ್ಲ. ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವ ಕೆಲಸ ನಡೆಯುತ್ತದೆ ತಾಂತ್ರಿಕ ದೋಷದ ಸಮಸ್ಯೆಯನ್ನು ಬಗೆಹರಿಸಲು ನಾವು ಕೊನೆಯ ಮುಖದಲ್ಲಿದ್ದೇವೆ, ಸಧ್ಯದಲ್ಲೇ ಬಾಕಿ ಕಂತಿನ ಹಣವನ್ನು ಮಹಿಳೆಯರ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.