Union budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ನಲ್ಲಿ ದೇಶದ ಯುವಕರಿಗೆ ಯುವತಿಯರಿಗೆ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮುಂದಿನ ಪೀಳಿಗೆ ಯುವಕ ಯುವತಿಯರನ್ನು ಅಭಿವೃದ್ಧಿಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮಾಡಿದೆ.
ನರೇಂದ್ರ ಮೋದಿ ಸರ್ಕಾರದ 2024 ನೇ ಸಾಲಿನ ಬಜೆಟ್ ಅತಿ ಹೆಚ್ಚು ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಉದ್ಯೋಗಿಗಳಿಗೆ ಸರ್ಕಾರದ ಹಲವು ಯೋಜನೆಗಳ ಮೂಲಕ ದೇಶದ ಯುವಶಕ್ತಿಯನ್ನು ಬಳಸಿಕೊಂಡು ದೇಶದ ಆರ್ಥಿಕಯ ಅಭಿವೃದ್ಧಿಗೆ ಲೆಕ್ಕಾಚಾರ ಹಾಕಿದೆ.
ಈ ಬಾರಿಯ ಬಜೆಟ್ ನಲ್ಲಿ ಯುವಕ ಯುವ ಸಮೂಹಕ್ಕೆ ಕೇಂದ್ರ ಸರ್ಕಾರವು ಯಾವೆಲ್ಲ ಘೋಷಣೆಗಳನ್ನು ಮಾಡಿದೆ ಗೊತ್ತಾ..?
- ಯುವ ಸಮೂಹದ ಉದ್ಯೋಗ ಸೃಷ್ಟಿಗಾಗಿ ಕೇಂದ್ರ ಸರ್ಕಾರವು ಮೂರು ಕೌಶಲ್ಯ ಯೋಜನೆಗಳನ್ನು ಜಾರಿ ಮಾಡಿದೆ.
- ಸ್ವಉದ್ಯೋಗ ಪ್ರಾರಂಭಿಸಲು ಯುವಕರಿಗೆ ಮುದ್ರಾ ಯೋಜನೆಯ ಸಾಲದ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
- ಸ್ಟ್ರೀಟ್ ಫುಡ್ ಹಬ್ಗಳ ನಿರ್ಮಾಣ ಮಾಡಿ ಯುವ ಸಮೂಹವನ್ನು ಉತ್ತೇಜಿಸುವ ಸ್ವಂತ ಉದ್ಯೋಗ ಮಾಡಲು ಪ್ರೋತ್ಸಾಯಿಸುತ್ತದೆ.
- ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.
- 12 ತಿಂಗಳು ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ₹5000 ಮಾಸಿಕ ಭತ್ಯೆಯನ್ನು ನೀಡಲಾಗುತ್ತದೆ.
- ಕೆಲಸ ಮಾಡುವ ಮಹಿಳೆಯರಿಗಾಗಿ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ
- ವಾರ್ಷಿಕವಾಗಿ 25000 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿಯೊಂದಿಗೆ ಸರ್ಕಾರ ಬೆಂಬಲಿತ ಗ್ಯಾರೆಂಟಿಯೊಂದಿಗೆ ₹7.5 ಲಕ್ಷದವರೆಗಿನ ಸಾಲ ನೀಡಲು ಮಾದರಿ ಕೌಶಲ್ಯ ಸಾಲ ಯೋಜನೆ ಪರಿಷ್ಕರಿಸಲಾಗಿದೆ.
- ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರು ಉನ್ನತ ಭಾರತೀಯ ಕಂಪನಿಗಳಿಂದ ಕೌಶಲ್ಯ ಪಡೆಯುತ್ತಾರೆ.