ಕರ್ನಾಟಕದಲ್ಲಿ ಮುಂಗಾರು ಈಗಾಗಲೇ ಕಾಲಿಟ್ಟಿದ್ದು, ಹಲವಡೆ ಉತ್ತಮ ಮಳೆ ಆಗುತ್ತಿದೆ ಕರ್ನಾಟಕ ಕರಾವಳಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿದ್ದು ಹಳೆಯ ಆರ್ಭಟ ಆರಂಭವಾಗುವ ಕಾರಣ ಯೆಲ್ಲೋ ಅಲಟ್೯ ಘೋಷಿಸಲಾಗಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಚಿಕ್ಕಮಂಗಳೂರು ದಕ್ಷಿಣ ಕನ್ನಡ ಉತ್ತರ ಕನ್ನಡ ಹಾಸನ ಕೊಡಗು ಮಂಡ್ಯ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆ ಸಂಭವಿಸುವ ಕಾರಣ ಯೆಲ್ಲೋ ಅಲಟ್೯ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ (ಜೂನ್ 19) ಉತ್ತಮ ಮಳೆ ಆಗುವ ಮುನ್ಸೂಚನೆಯನ್ನು ಅವಮಾನ ಇಲಾಖೆಯು ನೀಡಿದೆ. ಚಾಮರಾಜನಗರ ಚಿಕ್ಕಮಂಗಳೂರು ಮೈಸೂರು ಹಾಸನ ಕೊಡಗು ರಾಮನಗರ ಶಿವಮೊಗ್ಗ ಜಿಲ್ಲೆಗಳಲ್ಲಿ ಅಧಿಕ ಮಳೆ ಸಂಭವಿಸಲಿದ್ದು ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ.
ಜೂನ್ 22ರಿಂದ ಕೋರ್ ಮಾನ್ಸೂನ್ ಸ್ಥಳಗಳಲ್ಲಿ ವಿಶೇಷವಾಗಿ ದಕ್ಷಿಣ ಕರಾವಳಿ ಕರ್ನಾಟಕ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ದೈನಂದಿನ ಆಧಾರದ ಮೇಲೆ 200MM ಗಿಂತ ಹೆಚ್ಚಿನ ಮಳೆ ಆಗಲಿದೆ ಎಂದು ಹವಮಾನ ಇಲಾಖೆಯ ವರದಿಯು ತಿಳಿಸಿದೆ.
ಬೆಂಗಳೂರಿನಲ್ಲಿ ಸದ್ಯ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ಬಳಿಕ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಗರಿಷ್ಠ 31.1 ಡಿಗ್ರಿ ಉಷ್ಣಾಂಶ ಬೆಂಗಳೂರಿನಲ್ಲಿ ದಾಖಲಾಗಿದೆ. ಬೀದರ್ ನಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದ್ದು , ಜೂನ್ 22ರ ಬಳಿಕ ವಾರಂತ್ಯದಲ್ಲಿ ಅಧಿಕ ಮಳೆ ಆಗಲಿದೆ ಎಂದು ಹವಮಾನ ಇಲಾಖೆಯು ತಿಳಿಸಿದೆ. ಸದ್ಯ ರಾಜ್ಯದಲ್ಲಿ ಮುಂಗಾರು ಮಳೆಯು ಸ್ವಲ್ಪಮಟ್ಟಿಗೆ ತಗ್ಗಿದ್ದು ಮಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ. ಅಲ್ಲಲ್ಲಿ ಮಳೆಯಾದ ಕಾರಣ ಜಲಾಶಯಗಳಿಗೆ ನೀರು ಸ್ವಲ್ಪಮಟ್ಟಿಗೆ ಹರಿದು ಬರುತ್ತಿದ್ದು ಗರಿಷ್ಠ ಪ್ರಮಾಣದಲ್ಲಿ ನೀರು ಬರಲು ಉತ್ತಮ ಮಳೆ ಆಗಬೇಕಿದೆ.