ಇತ್ತೀಚಿಗೆ ರಕ್ಷಿತ್ ಶೆಟ್ಟಿ(Rakshit Shetty)ಯವರ ವಿರುದ್ಧ ದಾಖಲಾಗಿದ್ದ, ಹಕ್ಕುಸ್ವಾಮ್ಯ ಪ್ರಕರಣದ ವಿಚಾರಣೆಯು ಇಂದು ನ್ಯಾಯಾಲಯದಲ್ಲಿ ನಡೆದಿದೆ. ನವೀನ್ ಎಂಬುವವರು ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲಿಸಿದ್ದರು.
ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ರಿಲೀಸ್ ಆಗಿದ್ದ ಬ್ಯಾಚುಲರ್ ಪಾರ್ಟಿ ಎಂಬ ಚಿತ್ರದಲ್ಲಿ ನ್ಯಾಯ ಎಲ್ಲಿದೆ ಮತ್ತು ಗಾಳಿಮಾತು ಎಂಬ ಎರಡು ಹಾಡುಗಳನ್ನು ಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು MRT ಮ್ಯೂಸಿಕ್ ಸಂಸ್ಥೆಯು ಆರೋಪಿಸಿತ್ತು.
ಈ ಪ್ರಕರಣ ಸಂಬಂಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಇಂದು ನ್ಯಾಯಾಲಯಕದಲ್ಲಿ ಒಂದು ಗಂಟೆಗಳ ಕಾಲ ವಿಚಾರಣೆಯನ್ನು ಎದುರಿಸಿದ್ದಾರೆ.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ನಾನು ಈ ಪ್ರಕರಣದಲ್ಲಿ ರಾಜಿಯಾಗಲ್ಲ ಕಾನೂನು ಹೋರಾಟಕ್ಕೆ ಸಜ್ಜಾಗುತ್ತೇನೆ. ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಹಾಡುಗಳನ್ನು ಬಳಸಿಕೊಂಡಿದ್ದೇವೆ. ಕಾಫಿ ರೇಟ್ ಅಟ್ ಕುರಿತು ಏನು ಎಂಬುದು ಇನ್ನು ಯಾರಿಗೂ ಅರ್ಥವಾಗಿಲ್ಲ, ಎಂದು ತಿಳಿಸಿದರು.
ವಿಚಾರಣೆಗೆ ಕರೆದಿದ್ದರು ಅದಕ್ಕಾಗಿ ಹಾಜರಾಗಿದ್ದೇನೆ ಕಾರ್ಪೊರೇಟ್ ಬಗ್ಗೆ ಸಿನಿಮಾ ರಂಗದವರಿಗೆ ಜ್ಞಾನವಿಲ್ಲ, ನಾವು ನಮ್ಮ ಚಿತ್ರದಲ್ಲಿ ಬಳಕೆ ಮಾಡಲಾಗಿರುವ ಹಾಡು ಹಕ್ಕು ಸೌಮ್ಯದ ಉಲ್ಲಂಘನೆ ಆಗಿಲ್ಲ. ಒಂದು ಸಾಂಗ್ 6 ಸೆಕೆಂಡ್ ಬಳಕೆಯಾಗಿದೆ. ಹಾಗಾದರೆ ಕನ್ನಡದ ಯಾವ ಹಾಡನ್ನು ಸಿನಿಮಾಗಳಲ್ಲಿ ಬಳಕೆ ಮಾಡುವಂತೆಯೇ ಇಲ್ಲವಾ ಎಂದು ಪ್ರಶ್ನಿಸಿದರು.
ಚಿತ್ರೀಕರಣದ ಸಮಯದಲ್ಲಿ ಕೆಲವು ಹಳೆಯ ಹಾಡುಗಳನ್ನು ಬ್ಯಾಗ್ರೌಂಡ್ ನಲ್ಲಿ ಬಳಸುವ ಸನ್ನಿವೇಶವಿಟ್ಟು ಅದಕ್ಕಾಗಿ ಪ್ರೊಡಕ್ಷನ್ ಮ್ಯಾನೇಜರ್ ರಾಜೇಶ್ ರವರಿಗೆ ಹೇಳಿದ್ದೆ. ಅವರು ಕೂಡ ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಬಂತು ಅಷ್ಟು ಕೊಡುವ ಅವಶ್ಯಕತೆ ಇಲ್ಲ ಎಂದು ನಾವು ಮಾತುಕತೆಯನ್ನು ಅದಕ್ಕೆ ನಿಲ್ಲಿಸಿದ್ದೆವು ಎಂದು ತಿಳಿಸಿದರು.