Darshan Case: ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 200 ಸಾಕ್ಷಿಗಳನ್ನು ಸಂಗ್ರಹಿಸಿದ ಪೊಲೀಸರು

By Aishwarya

Published On:

Follow Us

Darshan Case: ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನಷ್ಟು ತುರುಕುಗಳಿಸಿದ್ದಾರೆ. ಇಲ್ಲಿವರೆಗೆ ಸುಮಾರು 200 ಸಾಕ್ಷ್ಯ ಗಳನ್ನು ಕಲೆ ಹಾಕಿದ್ದು ಇದೀಗ ಸಾಕ್ಷ್ಯಗಳನ್ನು ಒಂದಕ್ಕೊಂದು ಪೂರಕವಾಗಿರುವಂತೆ ಹೊಂದಿಸಿದ್ದಾರೆ.

ನಟ ದರ್ಶನ್ ಮತ್ತು ಸಹಚರರಿಗೆ ನ್ಯಾಯಾಂಗ ಬಂಧನ ಮುಂದುವರೆದಿದ್ದು, ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಕೊಲೆ ನಡೆದಿರುವ ಶೆಡ್, ದರ್ಶನ್ ಮನೆ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್, ಶೆಡ್ ಗೆ ಹೋಗುವ ರಸ್ತೆ ಇನ್ನು ಹಲವು ಕಡೆಗಳಿಂದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ.

ಇಷ್ಟ ಅಲ್ಲದೇ ಕೊಲೆ ನಡೆದ ಸ್ಥಳದಲ್ಲಿ ಚಿತ್ರಿಕರಣ ಮಾಡಲಾಗಿರುವ ಮೊಬೈಲ್ ವಿಡಿಯೋಗಳನ್ನು ಸಕಲೆ ಹಾಕಿದ್ದಾರೆ. ಈ ವಿಡಿಯೋ ಇನ್ನಷ್ಟು ಬಲಗೊಳಿಸಲು ಪೊಲೀಸರು ಹಲವಾರು ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಸಂಗ್ರಹಿಸಿರುವ ವಿಡಿಯೋಗಳನ್ನು FSL ಮೂಲಕ ಪರಿಶೀಲನೆಗೆ ಒಳಪಡಿಸಲಾಗಿದೆ. ವಿಶುಯಲ್ ಕಂಪಾರಿಷನ್ ತಂತ್ರಜ್ಞಾನದ ಮೂಲಕ ವಿಡಿಯೋದಲ್ಲಿರುವ ವ್ಯಕ್ತಿಗಳು ನಿಂದು ಒಬ್ಬರೇ ಅಥವಾ ಬೇರೆಯವರೇ ಎಂದು ಪರೀಕ್ಷೆ ಮಾಡಲಾಗಿದ್ದು, ಬಂಧಿಸಲಾಗಿರುವ ಆರೋಪಿಗಳು ಮತ್ತು ವಿಡಿಯೋದಲ್ಲಿರುವ ವ್ಯಕ್ತಿಗಳು ಒಬ್ಬರೇ ಎಂದು ತಿಳಿದು ಬಂದಿದೆ.

ಸಿಸಿಟಿವಿಯಲ್ಲಿ ಸರಿಯಾಗಿರುವ ಫೋಟೋಗಳು ಹಾಗೂ ಬಂಧಿಸಿದ ಸಮಯದಲ್ಲಿ ತೆಗೆದ ಫೋಟೋಗಳು ಹೋಲಿಕೆ ಆಗುತ್ತಿವೆಯೇ ಎಂಬುದು ಸಹ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತಿದೆ. ವಿಡಿಯೋದಲ್ಲಿರುವ ವ್ಯಕ್ತಿಗಳ ದೇಹದ ಆಕಾರ, ಮುಖದ ವಿವಿಧ ಅಂಗಗಳು, ಹೋಲಿಕೆ ಮಾಡಿ ನೋಡಲಾಗುತ್ತದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow