Prajwal Revanna: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ, ಅಶ್ಲೀಲ ವಿಡಿಯೋಗಳು ನಕಲಿ ಎಲ್ಲಾ ಅಸಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲವು(FSL) ನಲ್ಲಿ ದೃಢಪಟ್ಟಿದೆ.
ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣನವರ ಖಾಸಗಿ ವಿಡಿಯೋಗಳು ಹರಿದಾಡುತ್ತಿದ್ದವು. ಈ ಸಂಬಂಧ SIT ಕಂಡವು ತನಿಖೆ ನಡೆಸಲಾಗುತ್ತಿತ್ತು, ವೈರಲ್ ಆಗಿದ್ದ ವಿಡಿಯೋಗಳು ಅಸಲಿಯೋ ಅಥವಾ ನಕಲಿಯೋ ಎಂದು ಖಚಿತತೆ ಪಡೆದುಕೊಳ್ಳಲು ಎಲ್ಲಾ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳಿಸಲಾಗಿತ್ತು.
ಹಾಗಾಗಿ ವಿಧಿ ವಿಜ್ಞಾನ ಪ್ರಯೋಗಾಲವು ಈ ವಿಡಿಯೋಗಳ ಕುರಿತು ವರದಿಯನ್ನು ನೀಡಿದ್ದು, ಈ ವಿಡಿಯೋಗಳಲ್ಲಿ ಯಾವುದೇ ಎಡಿಟ್, ಅಥವಾ ಮಾರ್ಕ್ ಮಾಡಿಲ್ಲ ಯಾವುದೇ ರೀತಿಯಲ್ಲಿ ಅನಿಮೇಶನ್, ಗ್ರಾಫಿಕ್ಸ್ ಗಳನ್ನು ಬಳಸಲಾಗಿಲ್ಲ ಎಂದು FSL ವರದಿಯಲ್ಲಿ ಬಹಿರಂಗಪಡಿಸಿದೆ. ಈ ಕಾರಣ ಎಸ್ಐಟಿ ತನಿಖೆಗೆ ದೊಡ್ಡ ಬಲಬಂದಂತಾಗಿದ್ದು, ಪ್ರಜ್ವಲ್ ರೇವಣ್ಣನವರಿಗೆ ಸಂಕಷ್ಟ ಎದುರಾಗಿದೆ.
ಈ ವರದಿಯು ಈಗಾಗಲೇ ಎಸ್ಐಟಿ ಪೊಲೀಸರ ಕೈ ಸೇರಿದ್ದು, ತನಿಖೆ ಚುರುಕುಗೊಳಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪುರುಷನ ಮುಖ ತೋರಿಸಿಲ್ಲ, ಹಾಗಾಗಿ ಅದು ಪ್ರಜ್ವಲ್ ರೇವಣ್ಣ ಹೌದೋ ಹಲವು ಎಂಬುವುದು ಇದುವರೆಗೆ ದೃಢವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಹೌದೋ ಅಲ್ಲವೋ ಎಂಬುವುದು ಕೂಡ ಬಯಲಾಗಿದೆ.