ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ನಡೆದ ಹಿಂಸಾಚಾರದಲ್ಲಿ ಕೊನೆಗೂ ಬಾಂಗ್ಲಾದೇಶ ಪ್ರಧಾನಮಂತ್ರಿ ತಲೆದಂಡವಾಗಿದೆ. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಬಾಂಗ್ಲಾದೇಶದ ಸೇನೆಯು ಸರ್ಕಾರವನ್ನು ರಚನೆ ಮಾಡಿದೆ.
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಭದ್ರತಾ ದೃಷ್ಟಿಯಿಂದ ಶೇಖ್ ಹಸೀನಾ ಹಾಗೂ ಅವರ ಸಹೋದರಿ ಬಾಂಗ್ಲಾದ ಢಾಕಾ ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಶೇಖ್ ಹಸೀನಾ ಅವರ ತಂದೆ ಮುಜೀಬುರ್ ರೆಹಮಾನ್ ಹತ್ಯೆಯ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದರು. ಈಗ ಮತ್ತೆ ಶೇಖ್ ಹಸೀನಾ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಸಾಧ್ಯತೆ ಇದೆ. ಈ ಹಿಂದೆ ಭಾರತದಲ್ಲೇ ವಾಸವಿದ್ದ ಶೇಖ್ ಹಸೀನಾ ಅವರು ಮತ್ತೆ ಆಶ್ರಯ ಪಡೆಯಲು ಮುಂದಾಗಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಮೂರು ತಿಂಗಳಿಂದ ಈ ಪ್ರತಿಭಟನೆಯು ನಡೆಯುತ್ತಿದ್ದು, ಹಿಂಸಾಚಾರಕ್ಕೆ ಈಗಾಗಲೇ 300 ಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘರ್ಷಣೆಯು ಹೆಚ್ಚಾದ ಹಿನ್ನೆಲೆ ಸೇನೆಯ ಅಧಿಕಾರಿಗಳ ಜೊತೆ ಶೇಕ್ ಹುಸೇನಾ ಅವರ ಜೊತೆ ಸೋಮವಾರ ಸಭೆ ನಡೆಸಲಾಗಿತ್ತು. ಬಳಿಕ ದೇಶ ತೊರೆಯಲು ಸೂಚಿಸಲಾಗಿತ್ತು.
ಶೇಕ್ ಹುಸೇನಾ ಅವರ ರಾಜನ ಮೀನು ಪ್ರಕಟಿಸಿದ ಸೇನಾ ಮುಖ್ಯಸ್ಥ ವಾಕರ್ ಉಸ್ಮನ್, ಬಳಿಕ ಹಂಗಾಮಿ ಸರ್ಕಾರದ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದರು. ಮಿಲಿಟರಿಯು ದೇಶದ ಆಡಳಿತ ವಹಿಸಿಕೊಳ್ಳಲಿದೆ. ಸಾರ್ವಜನಿಕರು ಗಲಭೆಯಿಂದ ದೂರವಿರಬೇಕು ಎಂದು ವಾಕರ್ ತಿಳಿಸಿದರು. ಅಲ್ಲದೆ ಯಾವುದೇ ಪ್ರತಿಭಟನಾಕಾರರ ವಿರುದ್ಧ ದಾಳಿ ನಡೆಸುವಂತಿಲ್ಲ ಎಂದು ಸೇನೆ ಮತ್ತು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.