ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬ ರಕ್ಷಾ ಬಂಧನ. ಈ ದಿನ ವಿಷೇಶವಾಗಿ ರಾಕಿ ಕಟ್ಟಿ ಶುಭಕೋರುವ ಅಕ್ಕ-ತಂಗಿಯರಿಗೆ, ಅಣ್ಣ-ತಮ್ಮಂದಿರು ಪ್ರೀತಿಯಿಂದ ಉಡುಗೊರೆ ಕೊಡ್ತಾರೆ. ಇತ್ತೀಚಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲೂ ಈ ಹಬ್ಬವನ್ನು ಆಚರಣೆ ಮಾಡುತ್ತಿರುವುದನ್ನು ನೋಡಬಹುದು.
Raksha Bandhan 2024
ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಅದರಂತೆಯೇ 2024 ರ ರಕ್ಷಾ ಬಂಧನ ಹಬ್ಬವನ್ನು ನಾಳೆ (ಆಗಸ್ಟ್ 19) ರಂದು ಸೋಮವಾರದಂದು ಆಚರಿಸಲಾಗುತ್ತೇದೆ. ಹಾಗಾದರೆ ಈ ರಕ್ಷಾಬಂಧನದ ಇತಿಹಾಸ ಏನು.? ಭಾರತದಲ್ಲಿ ಈ ಹಬ್ಬದ ಪ್ರಾಮುಖ್ಯತೆ ಹೇಗೆ ಎಂಬುದರ ಕುರಿತು ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳೋಣ.
ರಕ್ಷಾಬಂಧನದ ಇತಿಹಾಸ
ಹಿಂದೂ ಪುರಾಣದ ಪ್ರಕಾರ, ಮಹಾಭಾರತದ ಅವಧಿಯಿಂದಲೇ ರಕ್ಷಾ ಬಂಧನದ ಇತಿಹಾಸ ಆರಂಭವಾಗುತ್ತದೆ. ಆ ಸಮಯದ ಸುದರ್ಶನ ಚಕ್ರ ತಾಗಿ ಕೃಷ್ಣನ ಕಿರುಬೆರಳಿಗೆ ಗಾಯವಾಗುತ್ತದೆ. ಆಕಸ್ಮಿಕವಾಗಿ ಆದ ಈ ಗಾಯವನ್ನು ತಪ್ಪಿಸಲು ದ್ರೌಪದಿಯು ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಕೃಷ್ಣನ ಮಣಿಕಟ್ಟಿನ ಮೇಲೆ ಬಟ್ಟೆಯನ್ನು ಕಟ್ಟುತ್ತಾಳೆ. ಈ ಮೂಲಕ ಹೆಚ್ಚಿನ ರಕ್ತ ಹೊರಕ್ಕೆ ಹೋಗದಂತೆ ತಡೆಯುತ್ತಾಳೆ. ದ್ರೌಪದಿಯ ಈ ಕ್ರಮದಿಂದ ಕೃಷ್ಣ ತೃಪ್ತನಾಗುತ್ತಾನೆ.
ದ್ರೌಪದಿಯ ಈ ಕಾಳಜಿಯನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾನೆ. ಇದನ್ನು ಶ್ರೀಕೃಷ್ಣನು ರಕ್ಷಾ ಸೂತ್ರ ಎಂದು ಕರೆಯುತ್ತಾನೆ. ಮಹಾಭಾರತದಲ್ಲಿ ದುಷ್ಯಾಸನ ದ್ರೌಪದಿಯ ಸೀರೆ ಎಳೆಯುವ ಸಂದರ್ಭದಲ್ಲಿ ಶ್ರೀಕೃಷ್ಣನು ದ್ರೌಪದಿಯ ಮಾನ ಕಾಪಾಡುತ್ತಾನೆ. ಈ ಮೂಲಕ ತನಗೆ ರಕ್ಷಾ ಸೂತ್ರ ಕಟ್ಟಿದ ಸಹೋದರಿಯ ರಕ್ಷಣೆ ಮಾಡುತ್ತಾನೆ. ಈ ಕಾರಣ ಕೃಷ್ಣನು ಸುತ್ತಿದ ರಕ್ಷಾ ಸೂತ್ರದಿಂದ ಸಹೋದರಿಯ ರಕ್ಷಣೆ ಆಗುತ್ತದೆ ಆ ಕಾರಣಕ್ಕಾಗಿ ಈಗಲೂ ಕೂಡ ರಕ್ಷೆಯನ್ನು ಕಟ್ಟಿ ಸಹೋದರರಿಗೆ ರಕ್ಷಣೆಯನ್ನು ನೀಡು ಎಂದು ದೇವರಲ್ಲಿ ಬೇಡಿಕೊಳ್ಳುವುದು ರಕ್ಷಾಬಂಧನದ ಪ್ರತಿತಿಯಾಗಿದೆ.
ರಕ್ಷಾಬಂಧನದ ಪ್ರಾಮುಖ್ಯತೆ
ರಕ್ಷಾ ಬಂಧನ ಎಂಬುದು ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿರುವ ವಿಶಿಷ್ಟ ಪದವಾಗಿದೆ. ಈ ಹಬ್ಬವು ಅಣ್ಣ – ತಂಗಿಯರ, ಒಡಹುಟ್ಟಿದವರು ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಜೊತೆಗೆ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ತಂಗಿಯು ಅಣ್ಣನಿಗೆ ರಾಖಿ ಕಟ್ಟಿ ದೇವರಲ್ಲಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.
ಈ ವರ್ಷ ರಕ್ಷಾ ಬಂಧನದ ಶುಭ ಸಮಯ
ಈ ವರ್ಷ, ಆಗಸ್ಟ್ 19 ರ ಸೋಮವಾರದಂದು ರಾಖಿಯನ್ನು ಆಚರಿಸಲಾಗುತ್ತದೆ. ಪೂರ್ಣಿಮಾ ತಿಥಿಯು ಆಗಸ್ಟ್ 19 ರಂದು ಮುಂಜಾನೆ 03:05 ಕ್ಕೆ ಪ್ರಾರಂಭವಾಗಿ ಆಗಸ್ಟ್ 19 ರಂದು ರಾತ್ರಿ 11:55 ಕ್ಕೆ ಬಂಧನ ಹಬ್ಬವನ್ನು ಆಚರಿಸುವುದು ಸರ್ವಾನುಮತದಿಂದ ಕೂಡಿರುತ್ತದೆ.