ಕನ್ನಡದ ಖ್ಯಾತ ಹಾಗೂ ಹಿರಿಯ ನಿರೂಪಕಿ ಅಪರ್ಣಾ (51) [Aparna Anchor] ನಿಧನರಾಗಿದ್ದರೆ. ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು (ಜುಲೈ 11) ಮೃತಪಟ್ಟಿದ್ದಾರೆ. ಅಪರ್ಣ ಸಾವಿನ ವಿಚಾರ ತಿಳಿದು ಅವರ ಅಭಿಮಾನಿಗಳು ಹಾಗೂ ಕನ್ನಡಿಗರು ಶಾಕ್‌ಗೆ ಒಳಗಾಗಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣಾ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಮಸಣದ ಹೂ ಸಿನಿಮಾದ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶ ಮಾಡಿದ್ದರು. 1984 ರಲ್ಲಿ ಮಸಣದ ಹೂ ಸಿನಿಮಾ ತೆರೆಕಂಡಿತ್ತು. ಇವರ ಸ್ಪಷ್ಟ ಕನ್ನಡದ ನಿರೂಪಣೆ ಕರ್ನಾಟಕದ ಪ್ರತಿ ಮನೆಯ ಮಾತಾಗಿತ್ತು. ರಾಜಕೀಯ ಸಭೆ ಸಮಾರಂಭಗಳಲ್ಲಿ, ಕನ್ನಡ ರಾಜ್ಯೋತ್ಸವದಂತಹ ರಾಜ್ಯದ ಎಲ್ಲಾ ಬೃಹತ್ ಸಂಭ್ರಮಾಚರಣೆಗಳ ವೇದಿಕೆಗಳಲ್ಲಿ ಇವರ ಧ್ವನಿ ಧ್ವನಿ ಮುಳುಗುತ್ತಿತ್ತು. ಕನ್ನಡ ಕಿರುತೆಯಲ್ಲೂ ಸಾಕಷ್ಟು ಹೆಸರುಗಳಿಸಿದ್ದ ಅಪರ್ಣ ಕೆಲವು ಧಾರಾವಾಹಿಗಳು ಮುತ್ತು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು.
90ರ ದಶಕದಲ್ಲಿ ಚಂದನವನಕ್ಕೆ ಕಾಲಿಟ್ಟ ಅಪರ್ಣ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ರೇಡಿಯೋ ಜಾಕಿಯಾಗಿ ನಮ್ಮ ಧ್ವನಿಯ ಮೂಲಕ ಕೇಳುಗರ ಮನವನ್ನು ಸೆಳೆಯುತ್ತಿದ್ದರು. 1998ರಲ್ಲಿ ದೀಪಾವಳಿ ಕಾರ್ಯಕ್ರಮ ಒಂದರಲ್ಲಿ ನಿರಂತರ 8 ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ಸೃಷ್ಟಿಸಿದ್ದರು.ಇಲ್ಲಿಯವರೆಗೆ ಅವರು 7000ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದರು.
ಸಂಗ್ರಾಮ’, ‘ನಮ್ಮೂರ ರಾಜ’, ‘ಸಾಹಸ ವೀರ’, ‘ಮಾತೃ ವಾತ್ಸಲ್ಯ’, ‘ಒಲವಿನ ಆಸರೆ’, ‘ಇನ್‌ಸ್ಪೆಕ್ಟರ್ ವಿಕ್ರಮ್’, ‘ಒಂದಾಗಿ ಬಾಳು’, ‘ಡಾಕ್ಟರ್ ಕೃಷ್ಣ’, ‘ಒಂಟಿ ಸಲಗ’, ‘ಚಕ್ರವರ್ತಿ’ ಸಿನಿಮಾಗಳಲ್ಲಿ ಅಪರ್ಣಾ ಅವರು ನಟಿಸಿದ್ದರು.
ಅಪರ್ಣಾ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ “ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.