ಕನ್ನಡ ನಾಡಿನ ಖ್ಯಾತ ಮಹಿಳಾ ಸಾಹಿತಿ ನಾಡೋಜ ಕಮಲಾ ಹಂಪನಾ (Kamala Hampana)(89) ಅವರು ಇಂದು ತಮ್ಮ ರಜಾಜಿನಗರದ ಮನೆಯಲ್ಲಿ ಹೃದಯಾಘಾತದಿಂದ ಮಲಗಿದ್ದಲ್ಲಿಯೇ ವಿಧಿವಶರಾಗಿದ್ದರೆ.
ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಪುಸ್ತಕಗಳುನ್ನು ಕೊಡುಗೆ ನೀಡಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅಗಿ ಕನ್ನಡಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದರು.
ನೆನ್ನೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಹೃದಯಾಘಾತಾಗಿದ್ದು ಕುಟುಂಬದವರು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು, ತೀವ್ರ ಹೃದಯಾಘಾತದ ಕಾರಣ ಕಮಲಾ ಹಂಪನ ಮನೆಯಲ್ಲಿಯೇ ಅಗಲಿದ್ದಾರೆ. ಇಂದು ಸಂಜೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಮಲಾ ಹಂಪನಾ ಅವರು ಕನ್ನಡದ ಖ್ಯಾತ ಲೇಖಕರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ತಮ್ಮ ವಿಭಿನ್ನ ಲೇಖನಗಳ ಹಾಗೂ ಭಾಷಣಗಳ ಮೂಲಕ ಕಳೆದ 60 ವರ್ಷಗಳಿಂದ ಕನ್ನಡ ಸಾಹಿತ್ಯಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಇವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿ ಶ್ರೀರಂಗಧಾಮನಾಯಕ ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ 1935 ರಲ್ಲಿ ಜನಿಸಿದರು. ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮೂಡುಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರಿಗೆ ಸರ್ಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಕನ್ನಡ ವಿಶ್ವವಿದ್ಯಾಲಯವು ನೀಡುವ ನಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ನಕ್ಕಿತು ಹಾಲಿನ ಬಟ್ಟಲು, ಚಂದನಾ, ಬಣವೆ ಕಮಲಾ ಹಂಪನಾ ಅವರ ಖ್ಯಾತ ಕಥಾ ಸಂಕಲನಗಳಾಗಿದ್ದವು. ಸಮಗ್ರ ಸಾಹಿತ್ಯವನ್ನು ಒಳಗೊಂಡ 9 ಬೃಹತ್ ಸಂಪುಟಗಳು ಹೊರಬಂದಿವೆ. ಇವರ ಮೊದಲ ಆಯ್ಕೆ ಸಂಶೋಧನೆಯಾಗಿದ್ದು ,ತುರಂಗ ಭಾರತ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ನಾಡು ನುಡಿ ನಾವು ಕುರಿತು ಸಂಶೋಧನೆಯನ್ನು ನಡೆಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದ್ದು, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ, ಸೇರಿದಂತೆ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಅಗಲಿದ್ದಾರೆ.