ಇತ್ತೀಚಿಗೆ ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಷಯವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಈ ಮಸೂದೆ ವಿರುದ್ಧ ಫೋನ್ ಪೇ CEO ವಿರೋಧ ವ್ಯಕ್ತಪಡಿಸಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಕನ್ನಡ ಪರ ಸಂಘಟನೆಗಳು ಮತ್ತು ಅನೇಕ ಕನ್ನಡಿಗರು ಫೋನ್ ಪೇ ಅಪ್ಲಿಕೇಶನ್ ತಮ್ಮ ಫೋನ್ ಗಳಿಂದ ಡಿಲೀಟ್ ಮಾಡಲಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಕುರಿತು ನಟ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸದ್ಯ ಕರ್ನಾಟಕದಾದ್ಯಂತ ನಟ ಕಿಚ್ಚ ಸುದೀಪ್(Kichcha Sudeep) ಅವರ ಧ್ವನಿಯಲ್ಲಿ ಫೋನ್ ಪೇ QR Codeಗಳು ಕೆಲಸ ನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಫೋನ್ ಪೇ ಗೆ ರಾಯಬಾರಿಯೂ ಆಗಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಫೋನ್ ಪೇ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕಿಚ್ಚ ಸುದೀಪ್ ಫೋನ್ ಪೇ ಜತೆಗಿನ ಒಪ್ಪಂದವನ್ನು ಕ್ಯಾನ್ಸಲ್ ಮಾಡಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ನಟ ಸುದೀಪ್ ಫೋನ್ ಪೇಗೆ ಜಾಹೀರಾತು ನೀಡಿದ್ರು. ಕನ್ನಡಿಗರ ಸ್ವಾಭಿಮಾನವೇ ಮುಖ್ಯ ಎಂದ ಕಿಚ್ಚ ಸುದೀಪ್ ಇದೀಗ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.ಈ ಕಾರಣದಿಂದ ಒಂದು ದಿನದ ಒಳಗಾಗಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.