ಕೊಲ್ಕತ್ತಾದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಹೋರಾಟ ಮತ್ತು ಪ್ರತಿಭಟನೆಗೆ ಕಾರಣವಾಗಿದೆ, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಅತಿ ಶೀಘ್ರದಲ್ಲಿಯೇ ವಿಚಾರಣೆ ನಡೆದು ಅವರುಗಳನ್ನು ಗಲ್ಲಿಗೇರಿಸಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಪ್ರಕರಣದ ಬಿಸಿ ಇರುವಾಗಲೇ ಮಹಾರಾಷ್ಟ್ರದಲ್ಲಿ ನಡೆದಿರುವ ಮತ್ತೊಂದು ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಕುಡಿದ ಮತ್ತಿನಲ್ಲಿ ‘ಸೆ*ಕ್ಸ್’ ಗೆ ಬೇಡಿಕೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಆಗಸ್ಟ್ 16ರ ಶುಕ್ರವಾರ ಆರೋಪಿಯೊಬ್ಬ ಕುಡಿದ ಮತ್ತಿನಲ್ಲಿ ಪರಿಚಿತ ಯುವತಿ ಬಳಿ ಲೈಂಗಿಕ ಕ್ರಿಯೆ ನಡೆಸುವ ಬೇಡಿಕೆ ಇಟ್ಟಿದ್ದು, ಇದಕ್ಕೆ ನಿರಾಕರಿಸಿದ ಯುವತಿ ಯುವಕನಿಗೆ ತಕ್ಕ ಪಾಠ ಕಳಿಸಿದ್ದಾಳೆ.
ಆರೋಪಿ ತನ್ನ ಬಳಿ ಸೆಕ್ಸ್ ಗೆ ಬೇಡಿಕೆ ಇಡುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಯುವತಿ, ಅಡುಗೆ ಮನೆಯಲ್ಲಿದ್ದ ಚಿಮುಟ ತಂದು ಆತನ ಖಾಸಗಿ ಅಂಗಕ್ಕೆ ಚುಚ್ಚಿದ್ದಾಳೆ. ಇದರ ಪರಿಣಾಮ ಈಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದರಿಂದ ತೀವ್ರವಾಗಿ ಗಾಯಗೊಂಡ ಅನಿಲ್ ಸತ್ಯನಾರಾಯಣ ರಚ್ಚ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲು ಆಸ್ಪತ್ರೆಯಿಂದ ಬಿಡುಗಡೆಯಾಗುವುದನ್ನು ಪೊಲೀಸರು ಕಾಯುತ್ತಿದ್ದಾರೆ.
ಸದ್ಯ ದೇಶದಲ್ಲಿ ಲೈಂಗಿಕ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಿಳೆಯರ ರಕ್ಷಣೆ ಎಲ್ಲಿ ಎಂಬುದು ಪ್ರಶ್ನೆ ಆಗುತ್ತಿದೆ. ಕೊಲ್ಕತ್ತಾ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬಿಳಿಸಿದ್ದು ಇವತಿಯ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಇಡೀ ದೇಶದ ವೈದ್ಯಕೀಯ ಸಮೂಹವು ಒಟ್ಟಿಗೆ ನಿಂತಿದೆ.