SIIMA 2024- ಸೈಮಾ ಪ್ರಶಸ್ತಿಗೆ ಕನ್ನಡಿಗರ ಕಮಾಲ್; ಯಾವೆಲ್ಲ ಸಿನಿಮಾಗಳು ಸೆಲೆಕ್ಟ್ ಆಗಿದೆ ಗೊತ್ತಾ..? ಈ ನಟರಿಗೆ ಅತ್ಯುತ್ತಮ ಪ್ರಶಸ್ತಿ

By Aishwarya

Published On:

Follow Us

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA 2024) ತನ್ನ 12 ಆವೃತ್ತಿಯ ದಕ್ಷಿಣ ಭಾರತದ ಅತ್ಯುತ್ತಮ ಮೂವಿಗಳನ್ನು ಗುರುತಿಸಿ ಗೌರವಿಸಲು ಮತ್ತೆ ಬಂದಿದೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ನಾಮನಿರ್ದೇಶನಗೊಂಡಿರುವ ಚಲನಚಿತ್ರಗಳ ಪಟ್ಟಿಯನ್ನು ನೆನ್ನೆ ( ಜುಲೈ 16) ರಂದು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಿನಿಮಾಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ದುಬೈನಲ್ಲಿ ಸೆಪ್ಟೆಂಬರ್ 14 ಮತ್ತು 15 ರಂದು ನಡೆಯಲಿದೆ.

2023ರಲ್ಲಿ ಬಂದ ಸೌತ್‌ ಸಿನಿಮಾಗಳ ನಾಮಿನೇಷನ್‌ ಪಟ್ಟಿ ಬಿಡುಗಡೆ ಮಾಡಲಾಗಿದ್ದು. ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಏನು ಕಮಾಲ್‌ ಮಾಡದಿದ್ದರೂ, ಸೈಮಾದ ಹಲವು ವಿಭಾಗಗಳಲ್ಲಿ ನಾಮಿನೇಷನ್‌ ಲಿಸ್ಟ್‌ ನಲ್ಲಿ ಕಾಣಿಸಿಕೊಂಡಿದೆ.

ಬಾರಿ ಸೈಮಾ ನಾಮಿನೇಷನ್​ನಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬರೋಬ್ಬರಿ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸದ್ಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಮಾತ್ರ ಸೈಮಾದವರು ರಿಲೀಸ್ ಮಾಡಿದ್ದಾರೆ. ‘ಕಾಟೇರ’ ಎಂಟು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಪ್ರಸ್ತುತ ಆವೃತ್ತಿಯ ವಿಜೇತರ ಆಯ್ಕೆಗೆ ಆನ್‌ಲೈನ್ ಮೂಲಕ ಮತದಾನ ವಿಧಾನ ಬಳಸಲಾಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ನಟಿಸಿರುವ ಚಿತ್ರಗಳಿಗೆ SIIMA ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪುಟದಲ್ಲಿ ಮತ ಹಾಕಬಹುದು.

ನಾಮ ನಿರ್ದೇಶನಗೊಂಡಿರುವ ಕನ್ನಡ ಚಿತ್ರಗಳು

  • ಆಚಾರ್ & ಕೋ
  • ಕಾಟೇರ
  • ಕೌಸಲ್ಯ ಸುಪ್ರಜಾ ರಾಮ
  • ಕ್ರಾಂತಿ
  • ಸಪ್ತ ಸಾಗರದಾಚೆ ಎಲ್ಲೋ- ಸೈಡ್​ ಎ

ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಕನ್ನಡದ ನಟರು

  • ದರ್ಶನ್ ತೂಗುದೀಪ್ ಶ್ರೀನಿವಾಸ್ – ಕಾಟೇರ
  • ಡಾಲಿ ಧನಂಜಯ್- ಗುರುದೇವ್ ಹೊಯ್ಸಳ
  • ರಾಜ್ ಬಿ ಶೆಟ್ಟಿ – ಟೋಬಿ
  • ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2
  • ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
  • ಶಿವರಾಜಕುಮಾರ್- ಗೋಸ್ಟ್
About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow