Solstice Day: ಇಂದು (ಜೂನ್ 21) ರಂದು ಅಯನ ಸಂಕ್ರಾಂತಿ ಉತ್ತರ ಗೋಳಾರ್ಧದಲ್ಲಿ ಸಂಭವಿಸಲಿದೆ. ಈ ದಿನವು ವರ್ಷದಲ್ಲಿ ಅತಿ ದೀರ್ಘವಾದ ಹಗಲು ಮತ್ತು ಅತಿ ಚಿಕ್ಕ ರಾತ್ರಿಯನ್ನು ಹೊಂದಿರುತ್ತದೆ. ಹಾಗಾದ್ರೆ ಈ ದಿನದ ವಿಶೇಷತೆಯೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು ಜೂನ್ 21 ಇಡೀ ವರ್ಷದಲ್ಲೇ ದೀರ್ಘ ದಿನ ಈ ರೀತಿ ವರ್ಷಕ್ಕೆ ಎರಡು ಬಾರಿ ಆಗುತ್ತದೆ. ಜೂನ್ ಹಾಗೂ ಡಿಸೆಂಬರ್ ವರ್ಷದಲ್ಲಿ ಎರಡು ಬಾರಿ ಅಯನ ಸಂಕ್ರಾಂತಿ ಸಂಭವಿಸುತ್ತದೆ. ಈ ಪ್ರಕ್ರಿಯೆಯು ಒಂದು ಪ್ರಮುಖ ಖಗೋಳ ಮತ್ತು ಸಾಂಸ್ಕೃತಿಕ ಘಟನೆಯಾಗಿದ್ದು, ಇದು ಋತುಗಳ ಬದಲಾವಣೆಯನ್ನು ಮತ್ತು ಹೊಸ ಪ್ರಾರಂಭದ ಸಮಯವನ್ನು ಸೂಚಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ಅಯನ ಸಂಕ್ರಾಂತಿಯು ಜೂನ್ 21 ರಿಂದ 23 ರವರೆಗೆ ಸಂಭವಿಸಿದರೆ, ನಂತರ ಚಳಿಗಾಲದ ಅಯನ ಸಂಕ್ರಾಂತಿಯು ಡಿಸೆಂಬರ್ 21 ರಿಂದ 23 ರವರೆಗೆ ನಡೆಯುತ್ತದೆ.
ಅಯನ ಸಂಕ್ರಾಂತಿ ಏಕೆ ಸಂಭವಿಸುತ್ತದೆ?
ಭೂಮಿಯು ತನ್ನ ಅಕ್ಷದ ಮೇಲೆ 23.5 ಡಿಗ್ರಿ ಕೋನದಲ್ಲಿ ಓಲಾಡುತ್ತದೆ. ಈ ಒಲವಿನಿಂದಾಗಿ, ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ಹೆಚ್ಚು ಒಲವನ್ನು ಹೊಂದಿರುವಾಗ, ದಕ್ಷಿಣ ಗೋಳಾರ್ಧವು ದೂರ ಒಲವನ್ನು ಹೊಂದಿರುತ್ತದೆ. ಈ ಸ್ಥಾನದಲ್ಲಿ, ಉತ್ತರ ಗೋಳಾರ್ಧವು ಸೂರ್ಯನ ಕಿರಣಗಳನ್ನು ನೇರವಾಗಿ ಸ್ವೀಕರಿಸುತ್ತದೆ, ಇದರಿಂದಾಗಿ ಹೆಚ್ಚು ಹಗಲು ಮತ್ತು ಕಡಿಮೆ ರಾತ್ರಿ ಉಂಟಾಗುತ್ತದೆ.
ಯಾವೆಲ್ಲಾ ದೇಶಗಳಿಗೆ ದೀರ್ಘ ಹಗಲು..?
- ಯುರೋಪ್: ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಸ್ಪೇನ್, ಜರ್ಮನಿ, ಪೋಲೆಂಡ್, ರಷ್ಯಾ, ಫಿನ್‌ಲ್ಯಾಂಡ್, ಸ್ವೀಡನ್, ನಾರ್ವೆ, ಐಸ್‌ಲ್ಯಾಂಡ್
- ಉತ್ತರ ಅಮೆರಿಕಾ: ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ
- ಏಷ್ಯಾ: ಭಾರತ, ಚೀನಾ, ಜಪಾನ್, ಕೊರಿಯಾ, ಮಂಗೋಲಿಯಾ
- ದಕ್ಷಿಣ ಅಮೆರಿಕಾ: ಉತ್ತರ ಭಾಗಗಳು