Suraj Revanna News: ಅಸಹಜ ಲೈಂಗಿಕ ಪ್ರಕರಣದ ಅಡಿಯಲ್ಲಿ ಸಿಐಡಿ ಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅಮಾವಾಸ್ಯೆ ಯಂದು ಬಿಳಿ ಬಳೆ ತೊಟ್ಟು ಸೀರೆ ಉಡುವುದು ಬೆಳಕಿಗೆ ಬಂದಿದೆ.
ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರ್ಕಾರವು ಸಿಐಡಿ ಗೆ ವಹಿಸಿದ್ದು, ಇದೀಗ ವಿಚಾರಣೆಯು ನಡೆಯುತ್ತಿದೆ ಇದೇ ಸಮಯದಲ್ಲಿ ಶಾಕಿಂಗ್ ಹೇಳಿಕೆಯಂತೆ ಪ್ರಕರಣ ದಾಖಲಿಸಿರುವ ಸಂತ್ರಸ್ತ ಯುವಕನು ಸೂರಜ್ ಬಳೆ ತೊಟ್ಟು ಸೀರೆ ಉಡುತ್ತಿದ್ದರು ಎಂದು ಅಚ್ಚರಿ ವಿಷಯ ಬಹಿರಂಗಪಡಿಸಿದ್ದಾನೆ.
2019ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ನಾನು ಹೆಚ್ಚಿನ ಜನ ಸೇರಿಸಿದ್ದೆ ಈ ಕಾರಣ ನನ್ನನ್ನು ಹೊಗಳಿ ನನ್ನ ಫೋನ್ ನಂಬರ್ ಪಡೆದುಕೊಂಡರು. ನಂತರ ಪ್ರತಿದಿನವೂ ಗುಡ್ ಮಾರ್ನಿಂಗ್, ಗುಡ್ ಇವಿನಿಂಗ್ ಜೊತೆಗೆ ಹೃದಯದ ಸಿಂಬಲ್ ಇಟ್ಟು ಸಂದೇಶ ಕಳುಹಿಸುತ್ತಿದ್ದರು. ಹೀಗೆ ಮೆಸೇಜ್ ಮುಂದುವರೆದು ಒಂಟಿಯಾಗಿ ತಮ್ಮ ಫಾರ್ಮ್ ಹೌಸ್ ಗೆ ಬರಲು ಹೇಳಿದರು. ನಾನು ಭೇಟಿಯಾದ ಸಂದರ್ಭದಲ್ಲಿ ಕೆಲಸ ಕುಡಿಸಬೇಕಾಗಿ ಮನವಿ ಮಾಡಿದ್ದೆ ಅದಕ್ಕಾಗಿ ಫಾರ್ಮ್ ಹೌಸ್ ಗೆ ಬರಲು ಹೇಳಿದ್ದರು ಅಲ್ಲಿಗೆ ಹೋದಾಗ ಬಲತ್ಕಾರದಿಂದ ಲೈಂಗಿಕ ದೌರ್ಜನ ನಡೆಸಿದ್ದಾರೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾನೆ.
ಸೂರಜ್ ರೇವಣ್ಣ ಸಾರ್ವಜನಿಕ ಜೀವನದಲ್ಲಿ ಯಾವುದೇ ಬೇರೆ ಅವರಿಗೆ ಎರಡು ಮುಖ. ಹೊರಗೆ ಒಂದು ಮುಖ ಒಳಗೆ ಒಂದು ಮುಖ ನಾಲ್ಕು ವರ್ಷದಿಂದ ಎಲ್ಲಿಯೂ ಹೇಳಿಕೊಳ್ಳಲು ಆಗಿರಲಿಲ್ಲ. ಫಾರ್ಮ ಹಾಸ್ ನಲ್ಲಿ ನನಗೆ ಕಾಲು ಹೊತ್ತಲೂ ಹೇಳಿದ್ದರು ನಾನು ಕಾಲು ಒತ್ತಿದೆ ಮುಂದೆ ಏನಾಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ತನ್ನ ದೂರಿನಲ್ಲಿ ವಿವರಿಸಿದ್ದಾನೆ.