Tharun Sudhir Marriage: ನವ ಜೀವನಕ್ಕೆ ಕಾಲಿಟ್ಟ ತರುಣ್-ಸೋನಲ್ ಶುಭ ಹರಸಿದ ಚಂದನವನ

By Aishwarya

Published On:

Follow Us

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಮದುವೆ ಸಮಾರಂಭವು ಅದ್ದೂರಿಯಾಗಿ ನಡೆಯಿತು.

ಇಂದು ಬೆಳಗ್ಗೆ 10:50 ರಿಂದ 11:35 ರ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದೆ. ಇಂದು ಸಂಪ್ರದಾಯದಂತೆ ನಡೆದ ಈ ಮದುವೆಗೆ ಗಣ್ಯಾತಿ ಗಣ್ಯರು ಹಾಗೂ ಅನೇಕ ಸಿನಿಮಾ ರಂಗದ ಕಲಾವಿದರು ಆಗಮಿಸಿ ನವ ಜೋಡಿಗೆ ಶುಭ ಕೋರಿದರು.

ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅವರ ಕನಸಾಗಿತ್ತು ಹೀಗಾಗಿ ಹಲವು ದಿನಗಳ ಹಿಂದೆ ಪ್ಲಾನ್ ಮಾಡಲಾಗಿತ್ತು. ಮದುವೆ ಹಾಲ್ ಅನ್ನು ಔಟ್ ಡೋರ್ ಫಿಲಂ ಕಾನ್ಸೆಪ್ಟ್ ನಲ್ಲಿ ತಯಾರಾಗಿದ್ದು, ಇಡೀ ಮದುವೆ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ ಲೈವ್ ಹೆಲಿಕ್ಯಾಸ್ಟ್ ಮಾಡಲಾಗುತ್ತಿದೆ.

Tharun Sudhir Marriage – ಮದುವೆ ಸಮಾರಂಭದಲ್ಲಿ ತಾರೆಯರ ದಂಡು

ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಅವರ ವಿವಾಹ ಹಿಂದೂ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ನಡೆದಿದೆ. ಇನ್ನು ಈ ವೇಳೆ ರಾಜಕೀಯ ಗಣ್ಯರು, ಸಿನಿತಾರೆಯರ ದಂಡೇ ಪಾಲ್ಗೊಂಡಿದ್ದರು.

ಸೋನಲ್ ಮತ್ತು ತರುಣ್ ವಿವಾಹಕ್ಕೆ ಸಿನಿಮಾರಂಗದ ಅನೇಕ ಕಲಾವಿದರು ಆಗಮಿಸಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಸುಧಾರಾಣಿ, ಮಾಳವಿಕಾ ಹಾಗೂ ಅವಿನಾಶ್, ಯೋಗಿ ದ್ವಾರಕೀಶ್, ರಾಕ್‌ಲೈನ್‌ ವೆಂಕಟೇಶ್‌ ವಿಶೇಷವಾಗಿ ಟಾಲಿವುಡ್‌ನ ನಟ ಜಗಪತಿ ಬಾಬು ಈ ಜೋಡಿಗೆ ಶುಭ ಹಾರೈಸಿದರು.

ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದೂರದ ಮುಂಬೈಯಿಂದಲೇ ಇಲ್ಲಿಗೆ ಬಂದು ಈ ನವ ಜೋಡಿಗೆ ಶುಭ ಹಾರೈಸಿದರು. ಅಲ್ಲದೆ, ರವಿಚಂದ್ರನ್ ಸಹೋದರ ಬಾಲಾಜಿ, ಸಾಧು ಕೋಕಿಲ, ತನಿಷಾ ಕುಪ್ಪಂಡ, ನಿರೂಪಕ ನಿರಂಜನ್ ದೇಶಪಾಂಡೆ, ನಟ-ನಿರ್ದೇಶಕ ರಘು ರಾಮ್, ಗೋಲ್ಡನ್ ಸ್ಟಾರ್ ಗಣೇಶ್, ತಾರಾ ಅನುರಾಧಾ, ವಿನೋದ್ ರಾಜ್, ಮೇಘನಾ ಗಾಂವ್ಕರ್ ಸೇರಿ ಬಹುತೇಜ ಮಂದಿ ಈ ನವ ಜೋಡಿಗೆ ಹಾರೈಸಿದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow