suraj revanna: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಬಂಧಿತನಾಗಿರುವ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ನ್ಯಾಯಾಲಯ ವಜಗೊಳಿಸಿದೆ.
ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ದಡಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸೂರಜ್ ರೇವಣ್ಣನವರನ್ನು ಜೂನ್ 23 ರಂದು ಬಂಧಿಸಲಾಗಿತ್ತು. ಬಳಿಕ ಉನ್ನತ ಮಟ್ಟದ ತನಿಖೆಗಾಗಿ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಜುಲೈ 18ರವರೆಗೂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತು.
27 ವರ್ಷದ ಚೇತನ್ ಕೆಎಸ್ ಎಂಬುವವರು ದೂರಿನ ಪ್ರಕಾರ, ಸೂರಜ್ ರೇವಣ್ಣ ಅವರು ಜೂನ್ 16 ರಂದು ಹೊಳೆನರಸೀಪುರ ತಾಲೂಕಿನ ಘನ್ನಿಕಡದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನಗೆ ಬೆದರಿಕೆ ಹಾಕಿದ್ದಾರೆ. ಅವರು ಕರೆದಾಗಲೆಲ್ಲ ತಮ್ಮ ಫಾರ್ಮ್‌ಹೌಸ್‌ಗೆ ಬರುವಂತೆ ಹೇಳಿದ್ದಾರೆ ಎಂದು ಸಂತ್ರಸ್ತ ಚೇತನ್ ಆರೋಪಿಸಿದ್ದಾರೆ.
ಈ ಮಧ್ಯ ಜಾಮೀನು ಕೋರಿ ಸೂರಜ್ ರೇವಣ್ಣನ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿತು. ಅರ್ಜಿದಾರರ ಪರವಾಗಿ ಮಂಡಿಸಿದ ಹಿರಿಯ ವಕೀಲ ಅರುಣ್ ಶಾಮ್ ಪಿಆರ್ ಪಿಸಿ 437 ಅಡಿಯಲ್ಲಿ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸರ್ಕಾರದ ಪರ ಅಭಿಯೋಜಕರು ಅಪೇಕ್ಷಿಸಿದರು. ಇಬ್ಬರ ವಾದ ಮಂಡನೆ ಬಳಿಕ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎನ್ ಶಿವಕುಮಾರ್ ವಜಗೊಳಿಸಿ ಆದೇಶಿಸಿದರು. ಹೀಗಾಗಿ ಮುಂದಿನ ಜುಲೈ 18ರವರೆಗೆ ಸೂರಜ್ ರೇವಣ್ಣ ಜೈಲಿನಲ್ಲಿ ಇರುವುದು ಅನಿವಾರ್ಯವಾಗಿದೆ.