ಮೂರು ವರ್ಷದ ಬಾಲಕಿಯ ಮೇಲೆ ನರ್ಸರಿ ಶಾಲೆಯ ಶಿಕ್ಷಕಿ ಲೈಂಗಿಕ ದೌರ್ಜನ್ಯ(Sexual Harassment) ನಡೆಸಿರುವ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರತಿದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ವಿಚಿತ್ರ ಲೈಂಗಿಕ ದೌರ್ಜನ್ಯ ಘಟನೆಗೆ ರಾಜ್ಯದ ರಾಜಧಾನಿದಲ್ಲಿ ನಡೆದಿದೆ. ವಿಷಯ ತಿಳಿದ ಬಾಲಕಿಯ ಪೋಷಕರು ಶಿಕ್ಷಕಿ ವಿರುದ್ಧ ಕೆ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೆಂಕಟೇಶ್ವರಪುರದ ಅನ್ವರ್ ಲೇಔಟ್ ನಲ್ಲಿರುವ ಖಾಸಗಿ ನರ್ಸಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನೂತನವಾಗಿ ಪೋಷಕರು ಬಾಲಕಿಯನ್ನು ಇದೇ ಜೂನ್ 6 ರಂದು ನರ್ಸರಿ ಶಾಲೆಗೆ ದಾಖಲು ಮಾಡಿದ್ದರು. ದಾಖಲು ಮಾಡಿದ 10 ದಿನಗಳ ಬಳಿಕ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದಳು. ಕಾರಣ ಕೇಳಿದ ಪೋಷಕರು ತನ್ನ ಖಾಸಗಿ ಅಂಗಾಂಗಗಳಲ್ಲಿ ನೋವಾಗಿರುವುದನ್ನು ಬಾಲಕಿಯು ಪೋಷಕರಿಗೆ ತಿಳಿಸುತ್ತಾಳೆ. ನಂತರ ಶಿಕ್ಷಕಿ ಎಸಗಿರುವ ಈ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಕ್ಷಣ ಬಾಲಕಿಯನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಸಿದ ಪೋಷಕರು ಶಿಕ್ಷಕಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.