ವಿಶ್ವದ ಖ್ಯಾತ ಉದ್ಯಮಿ ಅಂಬಾನಿ ಅವರ ಪುತ್ರರಾದ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಡಗರ ಸಂಭ್ರಮ ಈಗಾಗಲೇ ಶುರುವಾಗಿದೆ.
ನಾಳೆ(ಜುಲೈ 12) ರಂದು ಮುಂಬೈನಲ್ಲಿ ವಿವಾಹ ಜೀವನಕ್ಕೆ ಅನಂತ ಅಂಬಾನಿ(Anant Ambani Wedding) ಕಾಲಿಡಲಿದ್ದಾರೆ. ಜುಲೈ 4ರಂದು ಅದ್ದೂರಿ ವಿವಾಹ ಆರತಕ್ಷತೆಯು ನಡೆಯಲಿದೆ. ಮದುವೆಗೆ ಸಿದ್ಧತೆಗಳು ಈಗಾಗಲೇ ಬರದಿಂದ ಸಾಗುತ್ತಿದ್ದು, ಅತಿಥಿಗಳಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಮದುವೆ ಸಮಯದಲ್ಲಿ ಆಗಮಿಸುವ ಅತಿಥಿಗಳಿಗೆ ವಿಶೇಷ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮುಂಬೈನಲ್ಲಿ ನಡೆಯುವ ಅನಂತ ಅಂಬಾನಿ ಮದುವೆಗೆ ಆಗಮಿಸುವ ಅತಿಥಿಗಳನ್ನು ಕರೆದೊಯ್ಯಲು ಸುಮಾರು 2000 ಜೆಟ್ ಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, 100 ಹೆಚ್ಚು ಖಾಸಗಿ ವಿಮಾನಗಳನ್ನು ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ವಿವಾಹ ಸಂಭ್ರಮ ನಡೆಯಲಿದೆ. ಅನಂತ್ ರಾಧಿಕಾ ಮದುವೆಗೆ ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಕೊಡುಗೆಗಳನ್ನು ಧರಿಸುತ್ತಾರೆ.
ಅಂಬಾನಿ ಕುಟುಂಬದ ಈ ಸಮಾರಂಭದಲ್ಲಿ ಬಾಲಿವುಡ್ ನಿಂದ ರಾಜಕೀಯ ಲೋಕದವರಿಗೂ ದೊಡ್ಡ ವ್ಯಕ್ತಿಗಳು ಆಗಮಿಸಲಿದ್ದಾರೆ. ಇದಲ್ಲದೆ ವಿದೇಶದಲ್ಲಿರುವ ಅಂಬಾನಿಯ ವಿಶೇಷ ಅತಿಥಿಗಳು ಕೂಡ ಈ ಮದುವೆಗೆ ಆಮಂತ್ರಣ ನೀಡಲಾಗಿದೆ. ಇದಲ್ಲದೆ ಅಂಬಾನಿ ಕುಟುಂಬದಿಂದ ಭಾರತೀಯ ರಾಜಕೀಯ ಪಕ್ಷಗಳ ಎಲ್ಲಾ ನಾಯಕರಿಗೆ ಮದುವೆ ಆ ಮಂತ್ರಣ ಪತ್ರಗಳು ಕಳುಹಿಸಲಾಗಿದೆ.