ರಾಜ್ಯ ಸರ್ಕಾರಿ ನೌಕರರ(government employees) ಬಹುದಿನಗಳ ಬೇಡಿಕೆ ಅಗಿದ್ದ 7ನೇ ವೇತನ ಅಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರವು ಸಿದ್ಧತೆಗಳನ್ನು ನಡೆಸುತ್ತದೆ ಶೀಘ್ರದಲ್ಲೇ ಅಧಿಕೃತವಾಗಿ ವೇತನ ಕುರಿತು ಪ್ರಕಟಣೆ ಹೊರಬೀಳಿದೆ ಎನ್ನಲಾಗಿದೆ.
ಕಳದ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಅಯೋಗದ ಕುರಿತು ಚರ್ಚೆ ನಡೆಯಿತು ಸಂಪುಡವು ವೇತನ ಅಯೋಗದ ಜಾರಿಗೆ ಒಪ್ಪಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿಗೊಳಿವ ಅಧಿಕಾರವನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಯಿತು.
ರಾಜ್ಯ ಸರ್ಕಾರಿ ನೌಕರ ವೇತನವನ್ನು ಶೇ.25 ರಷ್ಟು ಹೆಚ್ಚಳ ಮಾಡಬೇಕು ಎನ್ನುವ ಸಲಹೆಯನ್ನು ಸಭೆಯಲ್ಲಿ ಕೆಲವು ಸಚಿವರು ನೀಡಿದರು. ಈ ಕುರಿತು ಸ್ಪಂದಿಸಿದ ಸಿಎಂ ವೇತನದಲ್ಲಿ ಶೇ.27 ರಷ್ಟು ಹೆಚ್ಚಳಕ್ಕೆ ಒಲವು ತೋರಿಸಿದರು.
ಕೆ.ಸುಧಕಾರ್ ನೇತೃತ್ವದ ಅವರ 7 ನೇ ವೇತನ ಅಯೋಗದ ವರದಿಯನ್ನು ಮಾಚ್೯ 16 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಸಲ್ಲಿಸಿದ್ದಾರೆ, ಈ ಅಂತಿಮ ವರದಿಯಲ್ಲಿ ರಾಜ್ಯದ ಸರ್ಕಾರಿ ನೌಕರ ವೇತನದಲ್ಲಿ ಶೇ 27 ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ.
ಈ ಮೂಲಕ 7ನೇ ವೇತನ ಆಯೋಗ ಜಾರಿ ಮಾಡಬೇಕೆಂಬ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಹತ್ತಿರವಾಗುತ್ತಿದೆ. ರಾಜ್ಯ ಸರ್ಕಾರವು ಶೀಘ್ರದಲ್ಲೇ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
Good News: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಭರ್ಜರಿ ಗುಡ್ ನ್ಯೂಸ್
By Aishwarya
Published On:
For Feedback - feedback@khnewstimes.com