ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಇದೀಗ ಭಾರತದ ಬ್ರಾಂಡ್ ವ್ಯಾಲ್ಯೂನಲ್ಲಿ ಮೂದಲನೆಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸೇರಿದಂತೆ ಎಲ್ಲಾ ಸ್ಟಾರ್ ನಟ ಮತ್ತು ನಟಿಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಕ್ರೋಲ್ ವರದಿ ತಿಳಿಸಿದೆ.
ಭಾರತದ ಅತೀ ಮೌಲ್ಯಯುತ 25 ಸೆಲೆಬ್ರಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಾಲಿವುಡ್ ನಟ ನಟಿಯರು, ಕ್ರೀಡಾಪಟುಗಳು ಒಳಗೊಂಡಂತೆ 25 ಜನರ ಹೆಸರನ್ನು ಬಿಡುಗಡೆ ಮಾಡಲಾಗಿದೆ. 2022 ರಲ್ಲಿ 176.9 ವಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದ್ದಿದರು ಅದರೆ ಈ ಬಾರಿಯ ಅಂದರೆ 2023 ರಲ್ಲಿ ವಿರಾಟ್ ಕೊಹ್ಲಿಯ ವಾರ್ಷಿಕ ಬ್ರ್ಯಾಂಡ್ ಮೌಲ್ಯವು 227.9 ಅಮೆರಿಕನ್ ಡಾಲರ್ ಮೌಲ್ಯದೊಂದಿಗೆ ಒಂದೇ ವರ್ಷದಲ್ಲಿ ಶೇಕಡಾ 29% ಏರಿಕೆಯಾಗಿದ್ದು, ದೇಶದ ಅತಿ ದುಬಾರಿ ಸೆಲೆಬ್ರಿಟಿಯಾಗಿದ್ದಾರೆ.
ಈ ಮೂಲಕ ಬಾಲಿವುಡ್ ನಟರಾದ ರಣವೀರ್ ಸಿಂಗ್ ಎರಡನೇ ಸ್ಥಾನ ಮತ್ತು ಶಾರೂಕ್ ಖಾನ್ ಮೂರನೇ ಸ್ಥಾನ ಪಡೆದಿದ್ದಾರೆ ಮತ್ತು ನಟ ಅಕ್ಷಯ್ ಕುಮಾರ್ 111.7 ಡಾಲರ್ ಮೌಲ್ಯದೊಂದಿಗೆ ನಾಲ್ಕುನೇ ಸ್ಥಾನದಲ್ಲಿ ಇದ್ದಾರೆ ಎಂದು ಕ್ರೋಲ್ ಕನ್ಸಲ್ಟನ್ಸಿ ಸಂಸ್ಥೆ ತಿಳಿಸಿದೆ.
ಕ್ರೋಲ್- ಸೆಲೆಬ್ರಿಟಿಗಳ ಟಾಪ್ ಬ್ರ್ಯಾಂಡ್ ವ್ಯಾಲ್ಯೂ ಪಟ್ಟಿ;
- ವಿರಾಟ್ ಕೊಹ್ಲಿ
- ರಣವೀರ್ ಸಿಂಗ್
- ಶಾರುಖ್ ಖಾನ್
- ಅಕ್ಷಯ್ ಕುಮಾರ್
- ಆಲಿಯಾ ಭಟ್
- ದೀಪಿಕಾ ಪಡುಕೋಣೆ
- ಎಂಎಸ್ ಧೋನಿ
- ಸಚಿನ್ ತೆಂಡೂಲ್ಕರ್
- ಅಮಿತಾಬ್ ಬಚ್ಚನ್
- ಸಲ್ಮಾನ್ ಖಾನ್
- ಹೃತಿಕ್ ರೋಷನ್
- ಕಿಯಾರಾ ಅಡ್ವಾಣಿ
- ರಣಬೀರ್ ಕಪೂರ್
- ಅನುಷ್ಕಾ ಶರ್ಮಾ
- ಕರೀನಾ ಕಪೂರ್ ಖಾನ್
- ಆಯುಷ್ಮಾನ್ ಖುರಾನಾ
- ಕಾರ್ತಿಕ್ ಆರ್ಯನ್
- ರೋಹಿತ್ ಶರ್ಮಾ
- ಹಾರ್ದಿಕ್ ಪಾಂಡ್ಯ
- ರಶ್ಮಿಕಾ ಮಂದಣ್ಣ
- ನೀರಜ್ ಚೋಪ್ರಾ
- ಅಲ್ಲು ಅರ್ಜುನ್
- ಸಾರಾ ಅಲಿ ಖಾನ್
- ವರುಣ್ ಧವನ್
- ಕತ್ರಿನಾ ಕೈಫ್