ಭೂ ಕುಸಿತದ ದುರಂತದಲ್ಲಿ ತೀವ್ರ ಹಾನಿಗೆ ಒಳಗಾಗಿರುವ ವಯನಾಡಿನಲ್ಲಿ ಕರ್ನಾಟಕ ಸರ್ಕಾರವು ನೂರು ಮನೆಗಳ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಕೇರಳದ ವಯನಾಡಿನಲ್ಲಿ ರಣಧೀರ ಮಳೆಗೆ ಭೂಕುಸಿತ ಉಂಟಾಗಿ ಇದುವರೆಗೂ 350ಕ್ಕೂ ಹೆಚ್ಚುಮುಂದಿ ಸಾವನ್ನಪ್ಪಿದ್ದು ಇನ್ನು 400 ಮಂದಿ ನಾಪತ್ತೆಯಾಗಿದ್ದಾರೆ. ಐದನೇ ದಿನವೂ ಕಾರ್ಯಾಚರಣೆ ಮುಂದುವರೆದಿದ್ದು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶವಗಳಿಗೆ ಶೋಧ ಕಾರ್ಯ ಮುಂದುವರಿಸಲಾಗಿದೆ.
ಈ ನಡುವೆ ದುರಂತದಲ್ಲಿ ಸಿಕ್ಕಿ ತೊಂದರೆ ಅನುಭವಿಸುತ್ತಿರುವ ಜನರಿಗೆ ಕರ್ನಾಟಕ ಸರ್ಕಾರ ನೆರುವಿನ ಹಸ್ತ ನೀಡಿದೆ. ಕರ್ನಾಟಕ ಸರ್ಕಾರದಿಂದ ನೂರು ಮನೆಗಳ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ವಿಷಯದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಲಾಗಿದ್ದು, ಭೂಕುಸಿತಿದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಹಾಗೂ ಕೇರಳ ಸರ್ಕಾರದೊಂದಿಗೆ ಕರ್ನಾಟಕ ಒಗ್ಗಟ್ಟಿನಿಂದ ನಿಂತಿದೆ. ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿ ಕೊಡಲಿದೆ ಎಂದು ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.