ಇನ್ನು ಕೆಲವು ದಿನಗಳಲ್ಲೇ ತಮ್ಮ ಹೊಸ ಬದುಕಿಕೆ ಕಾಲಿಡಲು ಸಿದ್ದವಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್‌ನ ಸಿಇಒ ವೀರೇನ್ ಅಜಿತ್‌ಕುಮಾರ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರು ತಮ್ಮ ಪ್ರೀ ವೆಡ್ಡಿಂಗ್ ಮೂಲಕವೇ ಎಲ್ಲರ ಮನೆ ಮಾತಾಗಿದ್ದಾರೆ.
ಇದೀಗ ತಮ್ಮ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರು ನೀಡಿದ್ದ ಲವ್ ಲೆಟರನ್ನೇ ತಮ್ಮ ಗೌನ್ ಮೇಲೆ ಮೇಲೆ ಪ್ರಿಂಟ್ ಮಾಡಿಸಿ ಆ ಗೌನ್ ತೊಟ್ಟು ಫೋಟೋ ಶೂಟ್ ಮಾಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಾಲ್ಯದ ಸ್ನೇಹಿತರಾಗಿದ್ದ ಅನಂತ್ ಹಾಗೂ ರಾಧಿಕಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅನಂತ್ ಅಂಬಾನಿ ಅವರು ಆರೋಗ್ಯ ಸಮಸ್ಯೆಗಳನ್ನು ಸಹ ರಾಧಿಕಾ ಅವರು ಅನಂತ್ ಅವರ ಕೈಬಿಡದೆ ಎಲ್ಲಾ ಸಂದರ್ಭದಲ್ಲೂ ಜೊತೆಯಲ್ಲಿದ್ದರು. ಮೊದಲ ಪ್ರೀ ವೆಡ್ಡಿಂಗ್ ನಲ್ಲಿ ಭಾರತ ದೊಡ್ಡ ದೊಡ್ಡ ಕಲಾವಿದರು ಹಾಜರಾಗುವ ಮೂಲಕ ಸದ್ದು ಮಾಡಿದ್ದ ಜೋಡಿ ಇದೀಗ ತಮ್ಮ ಗೌನ್ ನಿಂದ ಸುದ್ದಿಯಲ್ಲಿದ್ದಾರೆ.
ಸದ್ಯ ಸುದ್ದಿಯಲ್ಲಿರುವ ಈ ಕ್ಯೂಟ್ ಜೋಡಿ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ (BKC) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಲಿದ್ದಾರೆ.