ಮೂಡ ಹಗರಣ(Muda Scam); ಹೋರಾಟಕ್ಕೆ ತಿರುಳುವ ಮುನ್ನವೇ ಬಿಜೆಪಿ ನಾಯಕರು ಅರೆಸ್ಟ್; ಮೈಸೂರಿಗೆ ಗೂಡ್ಸ್ ಆಟೋದಲ್ಲಿ ತೆರಳಿದ ವಿ.ಪಕ್ಷ ನಾಯಕ ಆರ್ ಅಶೋಕ್

By Aishwarya

Published On:

Follow Us

Muda Scam: ಮೂಡ ಅಕ್ರಮದ ವಿರುದ್ಧ ಬಿಜೆಪಿಯು ರಾಜ್ಯಾದ್ಯಂತ ಕಾಂಗ್ರೆಸ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಅದರಂತೆಯೇ ಇಂದು ಬಿಜೆಪಿ ನಾಯಕರು ಮೈಸೂರಿನ ಮೂಡಾ ಕಚೇರಿಗೆ ಮುತ್ತಿಗೆ ಹಾಕಲು ತಿರುಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಕ್ರಮದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಪೊಲೀಸರು ವಿಪಕ್ಷ ನಾಯಕರನ್ನು ತಡೆದು ಮಾರ್ಗ ಮಧ್ಯದಲ್ಲಿ ವಾಪಸ್ ಕಳುಹಿಸಿದರು ,ಆದರೂ ಬಿಡದ ಆರ್.ಅಶೋಕ್ ಗೂಡ್ಸ್ ಆಟೋ ಏರಿ ಮೈಸೂರಿಗೆ ತೆರಳಿ ಹೋರಾಟ ಪ್ರತಿಭಟನೆ ನಡೆಸಿದರು. ಈ ವೇಳೆ ಡಾ.ಅಶ್ವಥ್ ನಾರಾಯಣ್ ಇನ್ನು ಮುಂತಾದ ನಾಯಕರು ಸಾತ್ ನೀಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ” ಪ್ರಜಾಸತ್ತಾತ್ಮಕ ಚಳುವಳಿ ಹತ್ತಿಕ್ಕುವ ಪ್ರಯತ್ನ ಖಂಡಿಸುತ್ತೇನೆ, ಕಾಂಗ್ರೆಸ್‌ ನ ನಾಯಕ ರಾಹುಲ್ ಗಾಂಧಿ ಪ್ರದರ್ಶಿಸುವ ಸಂವಿಧಾನದಲ್ಲಿ ವಿರೋಧಪಕ್ಷ ನಾಯಕರಿಗೆ ಹೋರಾಟ ಮಾಡುವ ಹಕ್ಕಿಲ್ಲವೇ..?” ಎಂದು ಪ್ರಶ್ನಿಸಿದರು.

ಸ್ವಯಂಘೋಷಿತ ಸಂವಿಧಾನ ಸಂರಕ್ಷಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ, ಹೋರಾಟ ಮಾಡಲು ಮೈಸೂರಿಗೆ ತೆರಳಿದ್ದರೆ ಮಾರ್ಗ ಮಧ್ಯದಲ್ಲಿ ಪೊಲೀಸರನ್ನು ಬಳಸಿಕೊಂಡು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಇದು ಸರ್ವಾಧಿಕಾರಿ ಧೋರಣೆ ಅಲ್ಲವೇ, ಪೊಲೀಸರನ್ನು ಬಳಸಿಕೊಂಡು ನಮ್ಮ ಹೋರಾಟವನ್ನು ಹತ್ತಿಕ್ಕುತ್ತಿದ್ದೀರಿ, ಮೈಸೂರಿಗೆ ತೆರಳದಂತೆ ಬಂಧನ ಮಾಡಿಸುತ್ತಿದ್ದಾರೆ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಇದಿಯಾ..? ಆತ್ಮಸಾಕ್ಷಿ ಇದ್ದರೆ ನೀವೇ ಕೇಳಿಕೊಳ್ಳಿ ಮೂಡ ಪ್ರಕರಣವನ್ನು ಸಿಬಿಐಗೆ ವಹಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಲು ಭಯ ಯಾಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow