ಬಿಜೆಪಿ ಜೆಡಿಎಸ್ ನ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ, ಜಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ನಡೆಸುತ್ತಿರುವುದನ್ನು ಖಂಡಿಸಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷವು ಜನಾಂದೋಲನದ ಮೂಲಕ ಶಕ್ತಿ ಪ್ರದರ್ಶನದ ಮಾಡಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಮತ್ತು ಜಗ್ಗುವುದಿಲ್ಲ, ಎಲ್ಲವನ್ನು ನಾನು ರಾಜಕೀಯವಾಗಿ ಎದುರಿಸುತ್ತೇನೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಗುಡುಗಿದರು.
ದೋಸ್ತಿಗಳ ಅಟ ನಡೆಯುವುದಿಲ್ಲ
ದೋಸ್ತಿ ಪಕ್ಷಗಳು ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನರು ನಮಗೆ ಸಂಪೂರ್ಣ ಬಹುಮತ ನೀಡಿದ್ದಾರೆ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ ಅದು ನಿಮ್ಮಿಂದ ಸಾಧ್ಯವಿಲ್ಲ, ಜನರಿಗೆ ಸತ್ಯ ಗೊತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಆಟ ನಡೆಯುವುದಿಲ್ಲ ಎಂದರು.
ನಮ್ಮ ಸರ್ಕಾರ ಬಡವರ, ಧೀನ ದಲಿತರ, ಹಿಂದುಳಿದ ವರ್ಗದವರ ಪರವಾಗಿ ಇರುವ ನಮ್ಮನ್ನು ಅಧಿಕಾರದಿಂದ ಕೆಳಗೆ ತಿಳಿಸುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತದೆ. ಜನರು ನಮ್ಮ ಬೆನ್ನಿಗೆ ಇದ್ದಾರೆ ನಿಮ್ಮ ಸುಳ್ಳು ಆರೋಪಗಳಿಗೆ ನಾನು ತಲೆಕೆಡಿಸುಕೊಳ್ಳುವುದಿಲ್ಲ ಎಂದರು.
ನನ್ನ ರಾಜಕೀಯ ಜೀವನ ತೆರೆದ ಪುಸ್ತಕ
ಯಾವುದೇ ವಿಷಯವಿಲ್ಲದೆ ಬಿಜೆಪಿ ಜೆಡಿಎಸ್ ಸುಮ್ಮನೆ ಪಾದಯಾತ್ರೆ ಮಾಡುತ್ತಿದೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ನಾನು ಪ್ರಾಮಾಣಿಕವಾಗಿದ್ದೇನೆ. ಅದು ಜನರಿಗೂ ಕೂಡ ಗೊತ್ತಿದೆ. ನನ್ನ ರಾಜಕೀಯ ಜೀವನದ ಪುಸ್ತಕದಲ್ಲಿ ಪ್ರತಿಪುಟವು ಪ್ರಾಮಾಣಿಕತೆಯಿಂದ ಕೂಡಿದೆ ಎಂದರು.
ಅವರದು ಪಾದಯಾತ್ರೆಯಲ್ಲ ಪಾಪ ಪೀಡಿತರ ಯಾತ್ರೆ
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ. ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಬಡವರ ಪರವಾದ ಯೋಜನೆಗಳನ್ನು ರೂಪಿಸಿರುವುದು ಬಯಸುವುದು ಬಿಜೆಪಿ ಮತ್ತು ಜೆಡಿಎಸ್ ಗೆ ಆಗುತ್ತಿಲ್ಲ. ಪಾದಯಾತ್ರೆ ಮಾಡುವ ನಾಟಕ ಮಾಡುತ್ತಿದ್ದಾರೆ ಅದು ಪಾದಯಾತ್ರೆಯಲ್ಲ ಪಾಪಪೀಡಿತರ ಯಾತ್ರೆ ಇಂದು ವಾಗ್ದಾಳಿ ನಡೆಸಿದರು.