ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಆಂಧ್ರಪ್ರದೇಶದ ಬಹುನಿರೀಕ್ಷಿತ ವಿಧಾನಸಭಾ ಚುನಾವಣೆಯು ನಡೆಯಿತು. ಈ ಚುನಾವಣೆಯಲ್ಲಿ ಎನ್. ಚಂದ್ರಬಾಬು ನಾಯ್ಡುರವರ ಟಿಡಿಪಿ ಮೈತ್ರಿ ಪಕ್ಷವು 175 ಸ್ಥಾನಗಳ ಪೈಕಿ 164 ಸ್ಥಾನ ಪಡೆದು ಅಭೂತಪೂರ್ವ ಗೆಲುವನ್ನು ಸಾಧಿಸಿಕೊಂಡಿತು.
ಇದೀಗ ಆಂಧ್ರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಮುನ್ನೆಲೆಗೆ ಬಂದಿದ್ದು ಕಳೆದ ಬುಧವಾರ ಆಂದ್ರಪ್ರದೇಶದ ನೂತನ ಮುಖ್ಯಮಂತ್ರಿಗಳಾಗಿ ಚಂದ್ರಬಾಬು ನಾಯ್ಡುರವರು ಪ್ರಮಾಣವಚನ ಸ್ವೀಕರಿಸಿದರು.
ಈ ಕಾರ್ಯಕ್ರಮಕ್ಕೆ ಪ್ರಧಾನಿಗಳಾದ ನರೇಂದ್ರ ಮೋದಿ ಕೇಂದ್ರ ಸಚಿವರಾದ ಅಮಿತ್ ಷಾ ಜೆಪಿ ನಡ್ದಾ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕೂಡ ಭಾಗವಹಿಸಿದ್ದರು.
ಈ ಸಮಯದಲ್ಲೇ ಜನಸೇನ ಮುಖ್ಯಸ್ಥರಾದ ಪವನ್ ಕಲ್ಯಾಣ್ ಸೇರಿದಂತೆ 25 ಸದಸ್ಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡು ಪ್ರಮಾಣವಚನ ಸ್ವೀಕರಿಸಿದರು. ಹಾಗಾದರೆ ನೂತನ ಸಚಿವ ಸಂಪುಟದ ಸಚಿವರುಗಳು ಯಾರು ಯಾರಿಗೆ ಯಾವ ಖಾತೆಯನ್ನು ನೀಡಲಾಗಿದೆ..? ಎಂಬ ಮಾಹಿತಿಗಾಗಿ ಈ ಲೇಖನ ಓದಿ ನೋಡಿ.
ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಪ್ರಮುಖ ಪಾತ್ರವಹಿಸಿದ್ದ ಎನ್. ಚಂದ್ರಬಾಬು ನಾಯ್ಡು ರವರು ಆಂಧ್ರಪ್ರದೇಶ ವಿಭಜನೆಯಾದ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಮೈತ್ರಿ ಪಕ್ಷಗಳಾದ ಜನ ಸೇನಾ ಮತ್ತು ಬಿಜೆಪಿಗೆ ಹಲವು ಸ್ಥಾನಗಳನ್ನು ಟಿಡಿಪಿ ಪಕ್ಷವು ಬಿಟ್ಟುಕೊಟ್ಟಿದ್ದು, ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷಕ್ಕೆ ಮೂರು ಹಾಗೂ ಬಿಜೆಪಿಯಿಂದ ಒಬ್ಬರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ.
ಆಂಧ್ರಪ್ರದೇಶ ನೂತನ ಸರ್ಕಾರದ ಸಚಿವರ ಪಟ್ಟಿ ಹೀಗಿದೆ..
ಎನ್. ಚಂದ್ರಬಾಬು ನಾಯ್ಡು – ಮುಖ್ಯ ಮಂತ್ರಿ ಹಾಗೂ ಕಾನೂನು ಸುವ್ಯವಸ್ಥಿತ, ಸಾರ್ವಜನಿಕ ಉದ್ಯಮ ಖಾತೆ ನಿಭಾಯಿಸಲಿದ್ದಾರೆ.
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ – ಉಪಮುಖ್ಯ ಮಂತ್ರಿ ಸ್ಥಾನ ಮತ್ತು ಪಂಚಾಯತ್ ರಾಜ್,ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಅರಣ್ಯ ಮತ್ತು ತಂತ್ರಜ್ಞಾನ ಖಾತೆ ವಹಿಸಲಿದ್ದಾರೆ.
ನಾರಾ ಲೋಕೇಶ್ – ಮಾನವ ಸಂಪನ್ಮೂಲ ಅಭಿವೃದ್ಧಿ, ಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಖಾತೆ
ಕಿಂಜರಾಪು ಅಚ್ಚಂನಾಯ್ಡು- ಕೃಷಿ ಸಹಕಾರ ಮಾರುಕಟ್ಟೆ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ
ಕೊಲ್ಲು ವೀರಂದ್ರ – ಗಣಿ ಮತ್ತು ಭೂ ವಿಜ್ಞಾನ ಅಬಕಾರಿ.
ನಾದೆಂಡ್ಲ ಮನೋಹರ್- ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಖಾತೆ
ಪೂಂಗೂರು ನಾರಾಯಣ- ಪೌರಾಡಳಿತ ಮತ್ತು ನಗರ ಅಭಿವೃದ್ಧಿ
ಅನಿತಾ ವಂಗಲಪುಡಿ – ಗ್ರಾಹಕ ವ್ಯವಹಾರಗಳು ಮತ್ತು ವಿಪತ್ತು ನಿರ್ವಹಣೆ.
ಸತ್ಯ ಕುಮಾರ್ ಯಾದವ್- ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ.
ಡಾಕ್ಟರ್ ನಿಮ್ಮಲಾ ರಾಮ ನಾಯ್ಡು -ಜಲ ಸಂಪನ್ಮೂಲ ಅಭಿವೃದ್ಧಿ
ನಸ್ಯಂ ಮೊಹಮ್ಮದ್ ಫಾರೂಕ್- ಅಲ್ಪಸಂಖ್ಯಾತರ ಕಲ್ಯಾಣ ಖಾತೆ
ಪಯ್ಯಾವುಲ ಕೇಶವ್ – ಹಣಕಾಸು ವಾಣಿಜ್ಯ ತೆರಿಗೆಗಳು ಮತ್ತು ಶಾಸಕಾಂಗ
ಕುಂದುಲ ದುರ್ಗೇಶ್ -ಪ್ರವಾಸೋದ್ಯಮ ಸಂಸ್ಕೃತಿ ಮತ್ತು ಸಿನ್ಮಾಟೊಗ್ರಫಿ
ಕೊಲುಸು ಪಾರ್ಥ ಸಾರಥಿ -ವಸತಿ ಖಾತೆ
ಡಾ.ಡೋಲಾ ಶ್ರೀ ಬಾಲ ವೀರಾಂಜನೇಯ ಸ್ವಾಮಿ – ಸಮಾಜ ಕಲ್ಯಾಣ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಸಚಿವಾಲಯ
ಗಮ್ಮಡಿ ಸಂಧ್ಯಾ ರಾಣಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಬುಡಕಟ್ಟು ಇಲಾಖೆ
ಟಿಜಿ ಭಾರತ್- ಕೈಗಾರಿಕೆಗಳು ಮತ್ತು ವಾಣಿಜ್ಯ ಆಹಾರ ಸಂಸ್ಕರಣೆ
ಮಂಡಿಪಲ್ಲಿ ರಾಮ್ ಪ್ರಸಾದ್ ರೆಡ್ಡಿ- ಸಾರಿಗೆ ಮತ್ತು ಯುವಜನತೆ ಸಚಿವಾಲಯ
ಎಸ್ ಸವಿತಾ- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ
ಒಟ್ಟಾರೆಯಾಗಿ ನೂತನ ಸಚಿವ ಸಂಪುಟದಲ್ಲಿ ಓರ್ವ ಬಿಜೆಪಿ, ಮೂವರು ಜನ ಸೇನಾ ಪಕ್ಷ ಉಳಿದ ಸಚಿವರು ಟಿಡಿಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ.