Pawan Kalyan: ಟಾಲಿವುಡ್ ನ ಬಹು ಬೇಡಿಕೆ ಅನ್ನಟರಲ್ಲಿ ಒಬ್ಬರಾದ ಪವನ್ ಕಲ್ಯಾಣ್ ಸಿನಿಮಾ ರಂಗದಲ್ಲ ಅಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ಭರ್ಜರಿ ಯಶಸ್ಸು ದೊರಕಿದೆ. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಗೆಲುವು ಕಂಡಿರುವ ಪವನ್ ಕಲ್ಯಾಣ್ ಇದೀಗ ಆಂಧ್ರದ ಉಪಮುಖ್ಯಮಂತ್ರಿಯಾಗಿ ಆಂಧ್ರಪ್ರದೇಶದ ರಾಜಕೀಯದಲ್ಲಿ ಹೊಸ ಅಲೆಯಲ್ಲಿ ಸೃಷ್ಟಿ ಮಾಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಕೂಡಲೇ ಹಲವು ಯೋಜನೆಗಳ ಮೂಲಕ ಆಂಧ್ರಪ್ರದೇಶದ ಮತದಾರರಲ್ಲಿ ಸಂತಸ ಉಂಟು ಮಾಡಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ಅವರನ್ನು ಅತೀವವಾಗಿ ಪ್ರೀತಿಸುತ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದೀಗ ತುಸು ನಿರಾಶೆ ಸಹ ಮೂಡಿದೆ. ಯಾಕೆಂದರೆ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಹಾಗೂ ಅನೇಕ ಖಾತೆಗಳನ್ನು ಕೂಡ ಪವನ್ ಕಲ್ಯಾಣ್ ಈಗ ನಿಭಾಯಿಸುತ್ತಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ ಮೂರು ಸಿನಿಮಾಗಳು ಬಿಡುಗಡೆಗೆ ಬಾಕಿ ಇದ್ದು, ಅವುಗಳ ಬಿಡುಗಡೆಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹಿನ್ನಲೆಯಲ್ಲಿ ಅನೇಕ ಅಭಿಮಾನಿಗಳಲ್ಲಿ ಇನ್ನು ಮುಂದೆ ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುತ್ತಾರೋ ಅಥವಾ ರಾಜಕೀಯದಲ್ಲಿ ಬ್ಯುಸಿ ಆಗುತ್ತಾರೋ ಎಂಬ ಪ್ರಶ್ನೆ ಮೂಡಿದೆ. ಇದರ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ.
“ನನಗೆ ಜನ ಮತ ಹಾಕಿ ಗೆಲ್ಲಿಸಿದ್ದಾರೆ, ಅಭಿವೃದ್ಧಿ ಮಾಡಲಿ ಎಂಬ ಕಾರಣಕ್ಕೆ ನನ್ನನ್ನು ಗೆಲ್ಲಿಸಿದ್ದಾರೆ. ನಾನು ಸಿನಿಮಾ ಚಿತ್ರೀಕರಣ ಮಾಡಿಕೊಂಡು ಕೂತರೆ ಜನ ನನ್ನನ್ನು ಬಯಲು ಆರಂಭಿಸುತ್ತಾರೆ. ಅಭಿವೃದ್ಧಿ ಮಾಡಲಿ ನಮ್ಮ ಪರವಾಗಿ ಕೆಲಸ ಮಾಡಲಿ ಇಂದು ಆಯ್ಕೆ ಮಾಡಿದರೆ ಇವನೇನೂ ಸಿನಿಮಾ ಮಾಡುತ್ತಿದ್ದಾನೆ ಎನ್ನುತ್ತಾರೆ. ಹೀಗಾಗಿ ಮೊದಲ ಮೂರು ತಿಂಗಳಲ್ಲಿ ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತೇನೆ” ಎಂದಿದ್ದಾರೆ
ಅದಾದ ಬಳಿಕ ಸಹಾಯ ಯಾವಾಗಲಾದರೂ ತೀರ ಬಿಡುವಿಲ್ಲದಷ್ಟು ಸಿನಿಮಾದಲ್ಲಿ ನಟಿಸುವೆ. ಇನ್ನು ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದು ಆ ಸಿನಿಮಾ ನಿರ್ಮಾಪಕರಿಗೂ ಸಹ ನಾನು ಈ ವಿಷಯ ತಿಳಿಸಿದ್ದೇನೆ ಅವರು ಸಹ ಒಪ್ಪಿಕೊಂಡಿದ್ದಾರೆ ಎಂದರು.
ಟಾಲಿವುಡ್ ನ ಬಹು ನಿರೀಕ್ಷಿತ “ಓಜಿ” ಸಿನಿಮಾ ಚೆನ್ನಾಗಿ ಮೂಡಿ ಬರುತ್ತಿದೆ ಇದು ತುಂಬಾ ಒಳ್ಳೆಯ ಸಿನಿಮಾ ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಿ ಎಂದು ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು.