ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರಿಗೆ ಇದೀಗ ಪ್ರಕರಣದಿಂದ ಬಿಗ್ ರಿಲೀಫ್ ದೊರೆತಿದೆ.
CID ತಂಡವು ಯಾವುದೇ ಸಮಯದಲ್ಲಾದರೂ ಯಡಿಯೂರಪ್ಪ ರವರನ್ನು ಬಂಧನ ಮಾಡಲು ವಾರೆಂಟ್ ಬಿಡುಗಡೆ ಮಾಡಿತ್ತು ಆದರೆ ಹೈಕೋರ್ಟ್ ಮೊರೆ ಹೋದ ಯಡಿಯೂರಪ್ಪನವರಿಗೆ ಸದ್ಯ ಬಂಧನ ಮಾಡದಂತೆ ಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ರವರ ಪೀಠವು ಮುಂದಿನ ವಿಚಾರಣೆಯವರೆಗೆ ಅವರನ್ನು ಬಂಧಿಸುವಂತಿಲ್ಲ ಆದೇಶ ಹೊರಡಿಸಿದೆ. ಜೂನ್ 17ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದ್ದು ವಿಚಾರಣೆಗೆ ಹಾಜರಾಗುವ ವರೆಗೂ ಬಂಧನ ಬೇಡ ಎಂದು ನ್ಯಾಯ ಪೀಠವು ತಿಳಿಸಿದೆ.
ಬಿ.ಎಸ್ ಯಡಿಯೂರಪ್ಪ ಮಾಜಿ ಸಿಎಂ ಆಗಿದ್ದು, ವಯಸ್ಸಾಗಿದ್ದು ಸ್ವಾಭಾವಿಕವಾಗಿ ಆರೋಗ್ಯದ ಅಡಚಣೆ ಇರುತ್ತವೆ. ಓಡಿ ಹೋಗುವ ವ್ಯಕ್ತಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ.
ಬಂಧನದ ಭೀತಿಯಲ್ಲಿದ್ದ ಬಿಎಸ್ ವೈ ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಹೈಕೊರ್ಟ್‌ಗೆ ಮೊರೆ ಹೋಗಿದ್ದರು. ಯಡಿಯೂರಪ್ಪ ಪರ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದರೆ, ಸರ್ಕಾರದ ಪರ ಎ.ಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.