Afghanistan: ಮುದ್ದು ಗುಂಡುಗಳ ಸುದ್ದಿನಿಂದ ಮನೆಯಲ್ಲೇ ಕುಳಿತಿದ್ದ ಅಫ್ಘಾನಿಸ್ತಾನದ ಜನರು ಮಂಗಳವಾರ ಬೀದಿಗಿಳಿದು ಸಂಭ್ರಮಿಸಿದ್ದಾರೆ. ತನ್ನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನವು ಸೆಮಿಫೈನಲ್ ಪ್ರವೇಶ ಮಾಡಿದ್ದು ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ.
ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ತಂಡವು ಟಿ20 ವಿಶ್ವಕರ್ಮ ಸೂಪರ್ 8 ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ತಂಡವನ್ನು DLS ನಿಯಮದಾಡಿಯಲ್ಲಿ 8 ರನ್ ಗಳ ಸೋಲಿಸುವ ಮೂಲಕ ಸೆಮಿ ಫೈನಲ್ ಅನ್ನು ತಲುಪಿದೆ.
ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಪಂದ್ಯವನ್ನು ಆಸ್ಟ್ರೇಲಿಯಾ ತಂಡವು ಬಹಳ ನಿರೀಕ್ಷೆಯಿಂದ ನೋಡುತ್ತಿದ್ದು ಅಫ್ಘಾನಿಸ್ತಾನ ತಂಡವು ಗೆದ್ದ ಹಿನ್ನೆಲೆ ಆಸ್ಟ್ರೇಲಿಯಾ ತಂಡ ಕಡಿಮೆ ರನ್ ರೈಟ್ ಅಂತರದಲ್ಲಿ ಟಿ20 ವಿಶ್ವಕಪ್ ಜರ್ನಿಯನ್ನು ಮುಗಿಸಿದೆ. ಅಫ್ಘಾನಿಸ್ತಾನವು ಸೆಮಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು ಜೂನ್ 27ರಂದು ಪಂದ್ಯ ನಡೆಯಲಿದೆ.
ಟಾಸ್ ಗೆದ್ದು ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 115 ರನ್ ಗಳಿಸಿತು. ಮಳೆಯಿಂದಾಗಿ 19 ಓವರ್‌ಗಳಲ್ಲಿ 114 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನುಹತ್ತಿದ ಬಾಂಗ್ಲಾದೇಶವು 17.5 ಓವರ್‌ಗಳಲ್ಲಿ ಕೇವಲ 105 ರನ್ ಗಳಿಸುವಷ್ಟರಲ್ಲಿ ತಂಡದ ಎಲ್ಲಾ ವಿಕೆಟ್ ಕಳೆದುಕೊಂಡರು.
ಆಫ್ಘನ್ ಪರ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 4 ವಿಕೆಟ್ ಪಡೆದರೆ, ಫಜಲ್ಹಾಕ್ ಫಾರೂಕಿ ಮತ್ತು ಗುಲ್ಬದಿನ್ ನೈಬ್ ತಲಾ ಒಂದು ವಿಕೆಟ್ ಪಡೆದರು.
ಬಾಂಗ್ಲಾದೇಶ ಪರ ಲಿಟ್ಟನ್ ದಾಸ್ 49 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಔಟಾಗದೆ ಉಳಿದರು. ಅಜೇಯ ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಹಕಾರಿ ಆಗಲಿಲ್ಲ. ಉಳಿದಂತೆ ಸೌಮ್ಯ ಸರ್ಕಾರ್ 10 ಎಸೆತಗಳಲ್ಲಿ 10 ರನ್ ಗಳಿಸಿದರೆ, ತೌಹಿದ್ ಹ್ರಿದೋಯ್ 9 ಎಸೆತಗಳಲ್ಲಿ 14 ರನ್ ಪೇರಿಸಿದರು. ದಾಸ್ ಹೊರತುಪಡಿಸಿದರೆ ಎರಡಂಕಿ ದಾಟಿದ್ದು ಇವರಿಬ್ಬರೇ. ಲಿಟನ್ ಅವರೊಂದಿಗೆ ಯಾರಿಗೂ ಜೊತೆಯಾಟ ಮುಂದುವರೆಸಲು ಅಫ್ಘಾನಿಸ್ತಾನದ ಬೋಲರ್ ಗಳು ಅವಕಾಶ ಮಾಡಿಕೊಡಲಿಲ್ಲ.