Paris Olympics 2024: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಂಪಿಕ್ಸ್ ನ ಫೈನಲ್ ಪಂದ್ಯದಿಂದ ಅನರ್ಹವಾಗಿದ್ದಾರೆ. ನಿಗದಿತ ತೂಕಕ್ಕಿಂತ 2 ಕೆಜಿ ಹೆಚ್ಚಿದ್ದ ಕಾರಣ ಫೈನಲ್ಸ್ ಪಂದ್ಯ ಆಡಲು ಅವಕಾಶ ಕೈ ತಪ್ಪಿದೆ.
ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದರು.ಆದರೆ ನಿಗದಿತ 50 ಕೆಜಿ ಸ್ಪರ್ಧೆಯಲ್ಲಿ 2 ಕೆ.ಜಿ ಹೆಚ್ಚಿದ ಕಾರಣ ಅನರ್ಹ ಗೊಳಿಸಲಾಗಿದೆ.
ಮಂಗಳವಾರ ರಾತ್ರಿ ವಿನೇಶ್ ಫೋಗಟ್(Vinesh Phogat) ಅವರ ತೂಕ ಪರೀಕ್ಷಿಸಿದಾಗ 2 ಕೆಜಿ ಹೆಚ್ಚಿತ್ತು. ಹೀಗಾಗಿ ತೂಕ ಕಡಿಮೆ ಮಾಡಲು ರಾತ್ರಿ ಇಡೀ ನಿದ್ರೆ ಮಾಡದೆ ಶ್ರಮಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ.
ವಿನೇಶ್ ಫೋಗಟ್ ಸೆಮಿ ಫೈನಲ್ಸ್ ಗೆದ್ದ ನಂತರ ವಿಶ್ರಾಂತಿ ಪಡೆಯದೆ ತೂಕ ಕಡಿಮೆ ಮಾಡಲು ರಾತ್ರಿ ಇಡೀ ಸೈಕಲಿಂಗ್, ಸ್ಕಿಪ್ಪಿಂಗ್ ಮಾಡಿದರು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ತನ್ನ ಕಲೆ ಕೂದಲು ಮತ್ತು ಗುರುಗಳನ್ನು ಸಹ ಕತ್ತರಿಸಿ, ತನ್ನ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ ಎನ್ನಲಾಗುತ್ತಿದೆ.
ಇಷ್ಟೆಲ್ಲಾ ಸಾಹಸ ಮಾಡಿದ ವಿನೇಶ್ ಫೋಗಟ್ ಕೇವಲ ಒಂದು ರಾತ್ರಿಯಲ್ಲಿ 1 ಕೆಜಿ 850 ಗ್ರಾಂ ತೂಕವನ್ನು ಕಡಿಮೆ ಮಾಡಿದ್ದಾರೆ. ಆದರೆ ಒಲಂಪಿಕ್ಸ್ ಕುಸ್ತಿ ನಿಯಮದಂತೆ ಯಾವುದೇ ಕುಸ್ತಿಪಟುಗೆ ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ದುರಾದೃಷ್ಟವಶಾತ್ ವಿನೇಶ್ ಫೋಗಟ್ 50 ಕೆ.ಜಿ 150 ಗ್ರಾಂ ಇದ್ದಾರೆ. ಹೀಗಾಗಿ ಫೈನಲ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.