Hardik Pandya: T20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ

By Aishwarya

Published On:

Follow Us

ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧದ ಜುಲೈ 27ರಂದು ಆರಂಭವಾಗುವ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ವಿರುದ್ಧದ T20 ಸರಣಿಯು ಜುಲೈ 27, 28 ಮತ್ತು 30ರಂದು ಶ್ರೀಲಂಕಾದ ಪೆಲೆಕೆಲೆಯಲ್ಲಿ ನಡೆಯಲಿದೆ. ಮೂರು ದಿನಗಳ ಏಕದಿನ ಪಂದ್ಯಗಳು ಆಗಸ್ಟ್ 2, 4 ಮತ್ತು 7 ರಂದು ನಿಗದಿಯಾಗಿದೆ.

T20 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಪಾಂಡ್ಯ ಏಕದಿನ ಸರಣಿಗೆ ವೈಯಕ್ತಿಕ ಕಾರಣಗಳಿಂದ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಫಿಟ್ ಆಗಿದ್ದು ಶ್ರೀಲಂಕಾ ವಿರುದ್ಧದ T20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐನ ಮೂಲವೊಂದು PTI ಗೆ ತಿಳಿಸಿದೆ.

ಭಾರತ ವಿಶ್ವ ಕಪ್ ಫೈನಲ್ ಗೆದ್ದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ T20 ಮದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, T20 ಸರಣಿಯನ್ನು ಯಾರು ನಡೆಸಲಿದ್ದಾರೆ ಎಂಬ ಪ್ರಶ್ನೆ ಇತ್ತು, ಜಿಂಬಾಂಬೆ ವಿರುದ್ಧದ ಸರಣಿಯಲ್ಲಿ ಭಾರತವು 4-1 ಸರಾಸರಿಯಯಲ್ಲಿ ಶುಭಮಾನ್ ಗಿಲ್ ನೇತೃತ್ವದಲ್ಲಿ ಗೆಲುವು ದಾಖಲಿಸಿತು. ಈ ಸರಣಿಗೆ ಉಪನಾಯಕನ ಹೆಸರು ಇನ್ನು ಪ್ರಕಟವಾಗಿಲ್ಲ ಸುರೇಶ್ ಕುಮಾರ್ ಯಾದವ ಅವರು ಈ ಸ್ಥಾನವನ್ನು ಅಲಂಕರಿಸಬಹುದು ಎಂದು ಮೂಲಗಳು ಹೇಳುತ್ತಿವೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow